ಗಾಡಿಕಾರ ಶ್ರೀಕೃಷ್ಣ ರನ್ನ ಬಿಡದಿರೊ ಎನ್ನ ಪ.
ಬಡವರ ರಕ್ಷಿಪನ್ನ ಅಡಿಗೆರಗುವೆ ನಿನ್ನ ಅ. ಪ.
ಕಡಲ ಮಗಳ ಗಂಡ ಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡ ಬೇಡಿದಿಷ್ಟ ದಾನಶೌಂಡ 1
ಶರಧಿ ಮಧ್ಯದಿ ಪುರವÀ ನಿರ್ಮಿಸಿದ ಧೀರಈರೇಳು ಭುವನೋದ್ಧಾರ ನೀರದಶ್ಯಾಮಲಾಕಾರ 2
ಮಂದಸ್ಮಿತ ಮುಖದಿಂದ ಬಂದ ಉಡುಪಿಲಿ ನಿಂದನಂದನ ಕಂದ ಮುಕುಂದ ವೃಂದಾರಕೇಂದ್ರ ಗೋವಿಂದ 3
ಭಾವಗೊಲಿದಜೋದ್ಭವ ಭವಸಂಜಾತರ ಕಾವಭವಾಬ್ಧಿತಾರಕದೇವ ಭಾವಿಸುವರ ಸಂಜೀವ 4
ಮಧ್ವಮುನಿಪನೊಡೆಯ ಶುದ್ಧಯತಿಗಣಪ್ರಿಯಶುದ್ಧವಾದಾಗಮಜ್ಞೇಯ ಮುದ್ದುಹಯವದನರಾಯ 5
***