Showing posts with label ವಂದಿಸುವೆ ಶ್ರೀ ರಾಘವೇಂದ್ರರಾಯರಿಗೆ bhupati vittala. Show all posts
Showing posts with label ವಂದಿಸುವೆ ಶ್ರೀ ರಾಘವೇಂದ್ರರಾಯರಿಗೆ bhupati vittala. Show all posts

Monday 6 September 2021

ವಂದಿಸುವೆ ಶ್ರೀ ರಾಘವೇಂದ್ರರಾಯರಿಗೆ ankita bhupati vittala

 ankita ಭೂಪತಿವಿಠಲ   

ರಾಗ: ತೋಡಿ  ತಾಳ: ಭಜನೀಠೇಕಾ


ವಂದಿಸುವೆ ಶ್ರೀ ರಾಘವೇಂದ್ರರಾಯರಿಗೆ 

ಬಂದ ಭಕುತರಿಗೆ ಆನಂದ ದಾಯಕಗೆ 


ದೈತ್ಯಕುಲದಲಿ ಜನಿಸಿ ದೈತ್ಯನಿಗೆ ಶ್ರೀಹರಿಯ

ವ್ಯಾಪ್ತಿಯನು ಸರ್ವತ್ರ ತೋರಿದವಗೆ

ದೈತ್ಯಾನುದರವಸೀಳಿ ಕೊಲ್ಲಿಸಿದ ಕಂದನಿಗೆ

ಭಕ್ತವರ ಬಾಲ ಪ್ರಹ್ಲಾದ ರಾಜನಿಗೆ  1

ಬಾಲಯತಿ ವೇಣು ಗೋಪಾಲನನು ಕುಣಿಸಿ

ಭೂಪಾಲನಾಪತ್ತು ಪರಿಹರಿಸಿದವಗೆ

ಪಾಲಿಸುತ ಲಕ್ಷ ಭೂಸುರ ಕುಟುಂಬಗಳ ಸಿಂ-

ಹಾಸನದಿ ಶೋಭಿಸಿದ ವ್ಯಾಸ ಮುನಿಗೆ  2

ವಿಜಯೀಂದ್ರಮುನಿಕರಜ ಶ್ರೀಸುಧೀಂದ್ರರಕಂದ

ಅಜಕರಾರ್ಚಿತ ಮೂಲ ರಾಮಾರ್ಚಕ

ಭಜಕರ ಸುರಧೇನು ಕುಜನವನ ಕುಠಾರ

ಭುಜಗೇಂದ್ರ ಶಯನ ಭೂಪತಿವಿಠಲ ದಾಸಾ  3

***