ankita ಭೂಪತಿವಿಠಲ
ರಾಗ: ತೋಡಿ ತಾಳ: ಭಜನೀಠೇಕಾ
ವಂದಿಸುವೆ ಶ್ರೀ ರಾಘವೇಂದ್ರರಾಯರಿಗೆ
ಬಂದ ಭಕುತರಿಗೆ ಆನಂದ ದಾಯಕಗೆ ಪ
ದೈತ್ಯಕುಲದಲಿ ಜನಿಸಿ ದೈತ್ಯನಿಗೆ ಶ್ರೀಹರಿಯ
ವ್ಯಾಪ್ತಿಯನು ಸರ್ವತ್ರ ತೋರಿದವಗೆ
ದೈತ್ಯಾನುದರವಸೀಳಿ ಕೊಲ್ಲಿಸಿದ ಕಂದನಿಗೆ
ಭಕ್ತವರ ಬಾಲ ಪ್ರಹ್ಲಾದ ರಾಜನಿಗೆ 1
ಬಾಲಯತಿ ವೇಣು ಗೋಪಾಲನನು ಕುಣಿಸಿ
ಭೂಪಾಲನಾಪತ್ತು ಪರಿಹರಿಸಿದವಗೆ
ಪಾಲಿಸುತ ಲಕ್ಷ ಭೂಸುರ ಕುಟುಂಬಗಳ ಸಿಂ-
ಹಾಸನದಿ ಶೋಭಿಸಿದ ವ್ಯಾಸ ಮುನಿಗೆ 2
ವಿಜಯೀಂದ್ರಮುನಿಕರಜ ಶ್ರೀಸುಧೀಂದ್ರರಕಂದ
ಅಜಕರಾರ್ಚಿತ ಮೂಲ ರಾಮಾರ್ಚಕ
ಭಜಕರ ಸುರಧೇನು ಕುಜನವನ ಕುಠಾರ
ಭುಜಗೇಂದ್ರ ಶಯನ ಭೂಪತಿವಿಠಲ ದಾಸಾ 3
***
No comments:
Post a Comment