Monday, 6 September 2021

ಗುರುರಾಘವೇಂದ್ರರಾ ಪಾದಧ್ಯಾನಾ ಮುಕ್ತಿ ಮಾರ್ಗಕೆ ಸೋಪಾನಾ ankita kamalapati

 ರಾಗ: [ರೀತಿಗೌಳ] ತಾಳ: [ಮಿಶ್ರನಡೆ/ತ್ರಿಪುಟ]

ಗುರು ರಾಘವೇಂದ್ರರಾ ಪಾದಧ್ಯಾನಾ

ಮುಕ್ತಿ ಮಾರ್ಗಕೆ ಸೋಪಾನಾ


ಸಂದರುಶನ ಮಾತ್ರಾದಿಂದಲೆನ್ನಯ ಮನಾ-

ನಂದವಾಯಿತು ಮನಕೀದಿನಾ ಮುಕ್ತಿಮಾರ್ಗಕೆ ಸೋಪಾನಾ 1

ಸ್ಮರಣೆಮಾತ್ರದಿ ತನ್ನಾ ಶರಣರ ಪೊರೆವನಾ

ಧರೆಯೊಳಗರಸಲು ಕಾಣೆ ನಾ ಮುಕ್ತಿಮಾರ್ಗಕೆ ಸೋಪಾನಾ 2

ವರಕಮಲಾಪತಿ ಪರನೆಂಬುದೆ ಸುಧಾ ಪರಿಮಳ

ಬೆರೆಸಿದ ಸಾಧನಾ ಮುಕ್ತಿಮಾರ್ಗಕೆ ಸೋಪಾನಾ 3

***


No comments:

Post a Comment