ನಾ ಪೊಂದಿದೆನೋ ನಿಶ್ಚಯ | ಪ |
ಈ ಪೀಡಿಸುವ ತ್ರಯತಾಪಗಳೋಡಿಸಿ
ಕೈಪಿಡಿದೆನ್ನ ಕಾಪಾಡಿದ ಗುರುರಾಯ | ಅ.ಪ |
ಘೋರವ್ಯಾಧಿಗಳ ನೋಡಿ ವಿಜಯರಾಯ
ಭೂರಿಕರುಣವ ಮಾಡಿ
ತೋರಿದವರೇ ಉದ್ಧಾರಕರೆಂದಂದಿ-
ನಾರಭ್ಯ ತವಪಾದ ಸೇರಿದೆ ಸಲಹೆಂದು
ಸೂರಿ ಜನಸಂಪ್ರಿಯ ಸುಗುಣೋ-
ದಾರ ದುರುಳನ ದೋಷನಿಚಯವ
ದೂರಗೈಸಿ ದಯಾಂಬುನಿಧೆ ನಿ-
ವಾರಿಸದೆ ಕರಪಿಡಿದಿ ಕರುಣದಿ | ೧ |
ಅಪಮೃತ್ಯುವನು ತರಿದಿ ಎನ್ನೊಳಗಿದ್ದ
ಅಪರಾಧಗಳ ಮೆರೆದಿ
ಚಪಲಚಿತ್ತನೊಗೊಲಿದು ವಿಪುಲಮತಿಯನಿತ್ತು
ನಿಪುಣನೆಂದೆನಿಸಿದಿ ತಪಸಿಗಳಿಂದಲಿ
ಕೃಪಣವತ್ಸಲ ನಿನ್ನ ಕರುಣೆಗೆ
ಉಪಮೆಗಾಣೆನೊ ಬುಧರಿಂದ ಜಗದಾ-
ಧಿಪನ ಕಿಂಕರನೆನಿಸಿ ಮೆರೆಸುವ | ೨ |
ಎನ್ನ ಪಾಲಿಸಿದಂದದಿ ಸಕಲಲಪ್ರ-
ಪನ್ನರ ಸಲಹೋ ಮೋದಿ
ಅನ್ಯರಿಗೀಪರಿ ಬಿನ್ನಪಗೈಯೆ ಜ-
ಗನ್ನಾಥವಿಠಲನ ಸನ್ನುತಿಸುವ ಧೀರ
ನಿನ್ನ ನಂಬಿದ ಜನರಿಗೆಲ್ಲಿಯ
ಬನ್ನವೋ ಭಕ್ತಾನುಕಂಪಿ ಶ-
ರಣ್ಯ ಬಂದೆನೋ ಈ ಸಮಯದಿ ಅ-
ಹರ್ನಿಶಿ ಧ್ಯಾನಿಸುವೆ ನಿನ್ನನು | ೩ |
– ಶ್ರೀ ಜಗನ್ನಾಥದಾಸರು
***
ರಾಗ ಮೋಹನ(ಭೂಪ್ ) ಅಟತಾಳ (ದೀಪಚಂದಿ)
Gopaladasaraya ninnaya pada
Na pondideno niscaya || pa ||
I pidisuva trayatapagalodisi
Kaipididenna kapadida gururaya || a.pa ||
Goravyadhigala nodi vijayaraya
Burikarunava madi
Toridavare uddharakarendandi-
Narabya tavapada seride salahendu
Suri janasampriya suguno-
Dara durulana doshanicayava
Duragaisi dayambunidhe ni-
Varisade karapididi karunadi ||1 ||
Apamrutyuvanu taridi ennolagidda
Aparadhagala meredi
Chapalachittanogolidu vipulamatiyanittu
Nipunanendenisidi tapasigalindali
Krupanavatsala ninna karunege
Upameganeno budharinda jagada-
Dhipana kinkaranenisi meresuva ||2||
Enna palisidandadi sakalalapra-
Pannara salaho modi
Anyarigipari binnapagaiye ja-
Gannathavithalana sannutisuva dhira
Ninna nambida janarigelliya
Bannavo baktanukampi Sa-
Ranya bandeno I samayadi a-
Harnisi dhyanisuve ninnanu | 3 |
***
pallavi
gOpAladAsarAya ninnaya pAda nA pondideno nishcaya
anupallavi
I pIdisuva traya tApagaLOdisi kai piDidennanu nI pAlisanudina
caraNam 1
ghOra vyAdigaLa mOdi vijayarAya bhUri karuNava mADi
tOridarivare uddhArakarendandinArabhya tava pAda sAride salahendu
sUrijana samprIya suguNOdhAra duruLana dOSa nicayava
dUragaiso dayAmbunidhe nivArisade kara piDidu bEgadi
caraNam 2
apa mrutyuvanu taride ennoLagidda aparAdhangaLa marede
capala cittanigolidu vipuLa matiyanittu nipuNanendeniside tapasigaLimdali
krpaNavatsala ninna karuNege upamegANenu santatavu kAshyapi-
yoLage budharinda jagadAdhipana kimkaranenisi mereyuva
caraNam 3
enna pAlisidandadi sakala prapannara salahO mOdi
anyarigIpari bhinnapagaiyye jagannAtha viTalana sannutisuva dhIra
ninna nambida janarigelliya bannavO bhaktAnukampi sharaNya
bandodagI samayadi aharnishI dhyAnisuve ninnanu
***
ಗೋಪಾಲ ದಾಸರಾಯ ನಿನ್ನಯ ಪಾದ
ನಾ ಪೊಂದಿದೆನೊ ನಿಶ್ಚಯ|| ಪ||
ಈ ಪೀಡಿಸುವ ತ್ರಯತಾಪಗಳೋಡಿಸಿ
ಕೈ ಪಿಡಿದೆÀನ್ನ ಕಾಪಾಡಿದ ಗುರುರಾಯ ||ಅ.ಪ||
ಘೋರ ವ್ಯಾಧಿಯನೆ ನೋಡಿ | ವಿಜಯರಾಯ
ಭೂರಿ ಕರುಣವ ಮಾಡಿ
ತೋರಿದರಿವರೆ ಉದ್ಧಾರಕರೆಂದಂದಿ
ನಾರಭ್ಯ ತವ ಪಾದ ಸಾರಿದೆ ಸಲಹೆಂದು ||
ಸೂರಿಜನ ಸಂಪ್ರೀಯ ಸುಗುಣೋದಾರ
ದುರುಳನ ದೋಷ ನಿಚಯವ
ದೂರಗೈಸಿ ದಯಾಂಬುನಿಧೆ ನಿ
ವಾರಿಸದೆ ಕರಪಿಡಿದು ಕರುಣದಿ
ಅಪ ಮೃತ್ಯುಯವನು ತಂದೆ ಎನ್ನೊಳಗಿದ್ದ ||1||
ಅಪರಾಧಗಳ ಮರೆದೆ
ಚಪಲ ಚಿತ್ತನಿಗೊಲಿದು ವಿಪುಲ ಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದಲಿ
ಕೃಪಣ ವತ್ಸಲ ನಿನ್ನ ಕರುಣೆಗೆ
ಉಪಮೆಗಾಣೆನೊ ಸಂತತವು ಕಾ
ಶ್ಯಪಿಯೊಳಗೆ ಬುಧರಿಂದ ಜಗದಾ
ಧಿಪನ ಕಿಂಕರನೆನಿಸಿ ಮೆರೆಯುವ ||2||
ಎನ್ನ ಪಾಲಿಸಿದಂದದಿ ಸಕಲ ಪ್ರ
ಪನ್ನರ ಸಲಹೊ ಮೋದಿ
ಅನ್ಯರಿಗೀಪರಿ ಬಿನ್ನಪ ಗೈಯೆ ಜ
ಗನ್ನಾಥ ವಿಠಲನ ಸನ್ನುತಿಸುವ ಧೀರ ||
ನಿನ್ನ ನಂಬಿದ ಜನರಿಗೆಲ್ಲಿಯ
ಬನ್ನವೋ ಭಕ್ತಾನು ಕಂಪಿಶ
ರಣ್ಯ ಬಂದೆನೊ ಈ ಸಮಯದಿಅ
ಹರ್ನಿಶಿ ಧ್ಯಾನಿಸುವೆ ನಿನ್ನನು ||3||
***********
ಶ್ರೀ ಜಗನ್ನಾಥದಾಸರ ಕೃತಿ
ರಾಗ ಮೋಹನ ಆದಿತಾಳ
ಗೋಪಾಲದಾಸರಾಯಾ ನಿನ್ನಯ ಪಾದ ।
ನಾ ಪೊಂದಿದೆನೊ ನಿಶ್ಚಯಾ ॥ ಪ ॥
ತಾಪತ್ರಯಗಳು ನಾನಾ ಪರಿಯಿಂದಲಿ ।
ತಾ ಪೀಡಿಸುತಲಿವೆ ಕಾಪಾಡೊ ಗುರುರಾಯಾ ॥ ಅ.ಪ ॥
ಘೋರ ವ್ಯಾಧಿಗಳ ನೋಡಿ । ವಿಜಯರಾಯಾ ।
ಭೂರಿ ಕರುಣವ ಮಾಡೀ ।
ತೋರಿದಿವರೆ ಉದ್ಧಾರಕರೆಂದೆಂದಿ ।
ನಾರಭ್ಯದಿಂದಲಿ ಸೇರಿದೆ ತವಪಾದಾ ॥
ಸೂರಿಜನ ಸಂಪ್ರೀಯ ಸುಗುಣೋದಾರ ।
ದಾರುಣ ದೋಷ ನಿಚಯವ ।
ದೂರಗೈಸು ದಯಾಂಬುಧೆ ಬಲು ।
ದಾರಕ ನೀ ಕರವಿಡಿದು ಹರುಷದಿ ॥ 1 ॥
ಅಪಮೃತ್ಯುವಿನ ಪರಿದೆ ಎನ್ನೊಳಗಿದ್ದ ।
ಅಪರಾಧಗಳ ಮರದೆ ।
ಚಪಲಚಿತ್ತನಿಗೊಲಿದು ವಿಪುಳ ಮತಿಯನಿತ್ತು ।
ನಿಪುಣನೆಂದೆನಿಸಿದೆ ತಪಸಿಗಳಿಂದಲಿ ॥
ಕೃಪಣವತ್ಸಲ ನಿನ್ನ ಕರುಣಕೆ ।
ಉಪಮೆ ಕಾಣೆನೊ ಸಂತತವು ಕಾ ।
ಶ್ಯಪಿಯೊಳಗೆ ಜನರಿಂದ ಜಗದಾ ।
ಧಿಪನ ಕಿಂಕರನೆನಿಸಿ ಮೆರದೆ ॥ 2 ॥
ಎನ್ನ ಪಾಲಿಸಿದಂದಾದಿ ಸಕಲ ಪ್ರಾ ।
ಪನ್ನರ ಸಲಹೋ ಮೋದಿ ।
ಅನ್ಯರಿಗೀಪರಿ ಬಿನ್ನಪಗೈಯೆ ಜ - ।
ಗನ್ನಾಥವಿಠಲನ ಸನ್ನುತಿಸುವ ಧೀರಾ ॥
ನಿನ್ನ ನಂಬಿದ ಜನರಿಗೀಪರಿ ।
ಬನ್ನವೆ ಭಕತಾನುಕಂಪಿ ಶ ।
ರಣ್ಯ ಬಂದೊದಗೀ ಸಮಯದಲಿ ಅ ।
ಹರ್ನಿಶಿ ಧೇನಿಸುವೆ ನಿನ್ನನು ॥ 3 ॥
*******