Showing posts with label ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ mahanidhi vittala. Show all posts
Showing posts with label ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ mahanidhi vittala. Show all posts

Friday, 6 August 2021

ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ ankita mahanidhi vittala

 ..

kruti by ಮಹಾನಿಧಿವಿಠಲರು mahanidhi vittalaru


ನೋಡೋ ಹನುಮ ನಂಬಿದೆ ಭೀಮಾ ವರಮಧ್ವರಾಯಾ ಪ


ತ್ರೇತಾಯುಗದಲಿ ರಾಮನ ಸೇವೆಗೆ ನೇಮದಿ ಬಂದು

ಆ ಲಂಕೆಯ ಬೆಂಕಿಗೆ ಆಹುತಿ ಇತ್ತ 1


ಹೃದಯವ ಹರಿಸಿದನವ ಮಾಡಿದ

ಹದನವ ತೋರಿಸೋ ಬುಧಜನ ನಮಿತನೆ 2


ದ್ವಾಪರ ಯುಗದಲಿ ಪರಮಾತ್ಮನ ಪೂಜಿಸಿ

ತೋರಿಸಿದಂಥ ಅಪಾರ ಮಹಿಮನೆ 3


ಕಲಿಯುಗದೊಳು ಮಹಾ ಖಳಮತಗಳನೆಲ್ಲಾ

ನಿನ್ನ ಸರಳಿಗಳಿಂದೊರಿಸಿದೆ ಅಕಳಂಕ ಮಹಿಮನೆ 4


ತಂದೆ ಹಸನ್ಮುಖವಿಠಲನ ಚಂದದಿಂದಲಿ ಪಾಡುವ

ಸುಂದರಮೂರುತಿಯೆ 5

***