..
kruti by ವೀರನಾರಾಯಣ Veeranarayana
ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಬೆಳಗಾಯ್ತರುಣ ಬೀರುತಿದೆ ಕಿರಣ ಪ
ರಂಗ ಬರುತಿಹನೆಂದು ಮಂಗಳಾಂಗಿಯರೆಲ್ಲಅಂಗಳ ಸಾರಿಸಿಸುತೆ ಮಂಗಳವ ಪಾಡುತ್ತೆರಂಗೋಲಿಯೊಳು ನಿನ್ನ ಚಿತ್ರವನು ರೇಖಿಸುತೆಶೃಂಗರಿಸುತಿಹರು ನೋಡೆದ್ದು ಬಾರೋ 1
ಹಿಂಡಿ ನೊರೆ ಹಾಲ್ಗಳನು ಗಿಂಡಿಯೊಳು ತಂದಿಟ್ಟುಕೊಂಡು ವದನವ ತೊಳೆಯ ಬಿಸಿ ನೀರು ತಂದಿಟ್ಟುತಂಡತಂಡದಿ ಭಕುತ ಮಂಡಲಿಯು ಕಾದಿಹುದು ಹೆಂಡತಿಯನೊಡಗೂಡಿಯುಂಡು ತಣಿಯು ಬಾರೋ2
ವೆಳ್ಳೆ ತುಂಬಿಗಳಾಡೆ ಮಂಗಳಾರತಿ ಮಾಡಿಬೆಳ್ಳಿ ಕಳಶಗಳೆನಲು ಅಮೃತವನು ತುಂಬಿಬೆಳ್ಳನೆಯ ಹೂಗಳನು ಮಡಿ ತಳಿಗೆಯೊಳು ಹಿಡಿದುಬಳ್ಳಿ ಮಲ್ಲಿಗೆ ತಾವು ಆತುರದಿ ನಿಂತಿಹವು 3
ಚಿಕ್ಕೆಗಳು ಬಾಡುತಿವೆ ಚೊಕ್ಕೆಲರು ತೀಡುತಿದೆಮಕ್ಕಳಾಡುಲೆವೆ ಕಕ್ಕುಲತೆಯೊಲಿ ನಮ್ಮ ರಕ್ಷಿಸಲು ನೀನೇಳು 4
ಸಾವಿರದ ಕಿವಿಯಂತೆ ಸಾವಿರದ ತಲೆಯಂತೆಸಾವಿರದ ಪಾದುಗಳು ನಿನಗಂತೆ ಕೇಳುಭಾವುಕರು ಕರ ಮಕದು ಭಕುತಿಯಿಂದಲಿ ಬೇಡುವರುಪಾವು ಮಂಚವ ಬಿಟ್ಟು ಬೇಗೆದ್ದು ಬಾರೋ 5
ಕಂಜದೆಲೆಯಲಿ ಬಿದ್ದ ಮಂಜುವನಿಗಳ ಮೇಲೆಕೆಂಜೆಡೆಯನಾಂಶುಗಳು ರಂಜಿಸಲು ದೀಪದೊಳುಕಂಜನಾಭ ನಿರಾಂಜನವ ಬೆಳಗಲಿಕೆಮುಂಜಾಮದಲೆ ಕಾಯುತಿಹಳೊ 6
ಶಿರಬಾಗಿ ನಿನ್ನ ಚರಣಗಳಿಗೆ ಬಂದಿದೆ ಶರಣನಿರುತ ಧನವಾರೋಗ್ಯವಿತ್ತು ದುರಿತಾಪಹರಣಪರಿಕಿಸದೆ ರಕ್ಷಿಸಲು ಬಾರೋ ಕರುಣಾಭರಣವರ ಗದುಗಿನಲಿ ಮೆರೆವ ವೀರನಾರಾಯಣ 7
***