Showing posts with label ಕಣ್ಣಿಗೆ ಕಟ್ಟಿದಂತಿದೆ ಬಣ್ಣದ ಕೊಳಲ ಭಾವಿಸಿ ನೋಡಬಾರದೆ shree krishna. Show all posts
Showing posts with label ಕಣ್ಣಿಗೆ ಕಟ್ಟಿದಂತಿದೆ ಬಣ್ಣದ ಕೊಳಲ ಭಾವಿಸಿ ನೋಡಬಾರದೆ shree krishna. Show all posts

Wednesday, 1 September 2021

ಕಣ್ಣಿಗೆ ಕಟ್ಟಿದಂತಿದೆ ಬಣ್ಣದ ಕೊಳಲ ಭಾವಿಸಿ ನೋಡಬಾರದೆ ankita shree krishna

 ..


ಕಣ್ಣಿಗೆ-ಕಟ್ಟಿದಂತಿದೆ ಪ


ಬಣ್ಣದ ಕೊಳಲ ಭಾವಿಸಿ ನೋಡಬಾರದೆಅ.ಪ.


ಕೂಡಿಹ ಸೋಗೆಗರಿಯ ಕಡುಸೊಂಪುಸೊಗಸುವಡೆದ ಸುಳಿಗುರುಳಿನ ಗುಂಪುಆಡುವ ಮುರುಹು ಮಾಗಾಯ್ಗಳ ಪೆಂಪುಕೂಡಿ ಕುಣಿವ ಕುಡಿಹುಬ್ಬಿನಲಂಪು 1


ಕೊಳಲೆಡೆÉಗೆಡೆಗೆ ತೋರುವ ಕೆಂಬೆರಳುಕೊನಬು ವಡೆದ ಕೊಂಕಿದ ಗೆರೆಗೊರಳುಥಳಥಳಿಸುವ ತೇಲುವ ಕಣ್ಣರಳುತನುಗಂಪನು ಸೂಸುವ ಸುಯ್ಯೆಲರು 2


ಸಿರಿಯೆದೆಯಲಿ ತೊಳಲುವ ಪುಲಿಯುಗುರುಸಿಂಗರಿಸಿದ ಸಿರಿ ಗಂಧದ ತಿಗುರುಕೊರಳ ದಂಡೆಯ ತುಳಸಿಯ ಹೊಸ ಚಿಗುರುಕೊನೆ ಮುಸುಕಲು ಪೊನ್ನುಗುರಿನ ಪೊದರು 3


ಮುಳಿದು ಯಶೋದೆ ಕಟ್ಟಿದ ಪೊಡೆದಾರಮುದ್ದು ಪೊಳೆಯನೇವಳದುಡಿದಾರಬಳಸಿದ್ಹವಳಸರದ ಶೃಂಗಾರಬಣ್ಣದುಡಿಯ ಬಿಗಿದುಟ್ಟ ವೈಯಾರ 4


ಒಂದಡಿ ನೆಲದೊಳು ನಿಂದಿಹ ನಿಲುವು, ಮ-ತ್ತೊಂದಡಿ ಸಾರ್ಚಿಪ ಬಲು ಗೆಲುವುಮುಂದೆ ಪಶುಗಳ ಮನ್ನಿಪನಿಲವು ತಂದೆ ಶ್ರೀಕೃಷ್ಣನಂದಿಗೆ ಪಾದದೊಲವು5

****