Wednesday, 1 September 2021

ಕಣ್ಣಿಗೆ ಕಟ್ಟಿದಂತಿದೆ ಬಣ್ಣದ ಕೊಳಲ ಭಾವಿಸಿ ನೋಡಬಾರದೆ ankita shree krishna

 ..


ಕಣ್ಣಿಗೆ-ಕಟ್ಟಿದಂತಿದೆ ಪ


ಬಣ್ಣದ ಕೊಳಲ ಭಾವಿಸಿ ನೋಡಬಾರದೆಅ.ಪ.


ಕೂಡಿಹ ಸೋಗೆಗರಿಯ ಕಡುಸೊಂಪುಸೊಗಸುವಡೆದ ಸುಳಿಗುರುಳಿನ ಗುಂಪುಆಡುವ ಮುರುಹು ಮಾಗಾಯ್ಗಳ ಪೆಂಪುಕೂಡಿ ಕುಣಿವ ಕುಡಿಹುಬ್ಬಿನಲಂಪು 1


ಕೊಳಲೆಡೆÉಗೆಡೆಗೆ ತೋರುವ ಕೆಂಬೆರಳುಕೊನಬು ವಡೆದ ಕೊಂಕಿದ ಗೆರೆಗೊರಳುಥಳಥಳಿಸುವ ತೇಲುವ ಕಣ್ಣರಳುತನುಗಂಪನು ಸೂಸುವ ಸುಯ್ಯೆಲರು 2


ಸಿರಿಯೆದೆಯಲಿ ತೊಳಲುವ ಪುಲಿಯುಗುರುಸಿಂಗರಿಸಿದ ಸಿರಿ ಗಂಧದ ತಿಗುರುಕೊರಳ ದಂಡೆಯ ತುಳಸಿಯ ಹೊಸ ಚಿಗುರುಕೊನೆ ಮುಸುಕಲು ಪೊನ್ನುಗುರಿನ ಪೊದರು 3


ಮುಳಿದು ಯಶೋದೆ ಕಟ್ಟಿದ ಪೊಡೆದಾರಮುದ್ದು ಪೊಳೆಯನೇವಳದುಡಿದಾರಬಳಸಿದ್ಹವಳಸರದ ಶೃಂಗಾರಬಣ್ಣದುಡಿಯ ಬಿಗಿದುಟ್ಟ ವೈಯಾರ 4


ಒಂದಡಿ ನೆಲದೊಳು ನಿಂದಿಹ ನಿಲುವು, ಮ-ತ್ತೊಂದಡಿ ಸಾರ್ಚಿಪ ಬಲು ಗೆಲುವುಮುಂದೆ ಪಶುಗಳ ಮನ್ನಿಪನಿಲವು ತಂದೆ ಶ್ರೀಕೃಷ್ಣನಂದಿಗೆ ಪಾದದೊಲವು5

****


No comments:

Post a Comment