RAO COLLECTIONS SONGS refer remember refresh render DEVARANAMA
ರಾಗ: ಲಲಿತ್ ತಾಳ: ಆದಿ
ರಾಘವೇಂದ್ರ ದಯತೋರೋ
ಬಾಗಿಭಜಿಪೆ ಮನ್ನಿಸೆನ್ನ ಪ
ರಾಗಭರಿತ ಜೀವನವೆಂಬ
ಸಾಗರದೊಳು ಮುಳುಗುತಿಹೆನು
ಬೇಗ ಸುಮತಿ ಪಥವನಿತ್ತು
ಸಾಗಿಸಯ್ಯ ಭವದನೌಕೆ 1
ಭಂಗಗೊಳಿಸು ಸರ್ವಪಾಪ
ಹಿಂಗಿಸಯ್ಯ ಭವದತಾಪ
ರಂಗ ಶ್ರೀ ಕಮಲೇಶನ ಪಡೆವ
ಮಂಗಳಪಥವ ತೋರಿಸಯ್ಯ 2
***