Showing posts with label ತುತಿಸಲಳವೇ ಶ್ರೀ ವರದೇಂದ್ರನಾ pranesha vittala. Show all posts
Showing posts with label ತುತಿಸಲಳವೇ ಶ್ರೀ ವರದೇಂದ್ರನಾ pranesha vittala. Show all posts

Monday 11 November 2019

ತುತಿಸಲಳವೇ ಶ್ರೀ ವರದೇಂದ್ರನಾ ankita pranesha vittala

by ಪ್ರಾಣೇಶದಾಸರು
ತುತಿಸಲಳವೇ ಶ್ರೀ ವರದೇಂದ್ರನಾ ಅಮಿತ ಮಹಿಮ |ಕ್ಷಿತಿಸುರಗುರುಸುಗುಣ ಸಾಂದ್ರನ ಮುನಿಪನ ಪ

ಭಾಗವತರ ಪ್ರಿಯನೆನಿಪನ ಪ್ರಣತ ಜನರ |ರೋಗ ಕಳೆದು ಸುಖ ಕೊಡುವನ ಕುಮತಗಳನು |ಬೇಗ ಗೆಲಿದು ಸುಮತಿ ಕೊಡುವನ ದಯಾ ಸಮುದ್ರ |ಯೋಗಿವರ್ಯರವಿಪ್ರಕಾಶನಾ ಅನಘನ 1

ರಾಘವೇಂದ್ರರನುಗ್ರಹ ಪಾತ್ರನ ವೈಷಿಕದ ಕು |ಭೋಗತೊರೆದ ನಿಷ್ಪ್ರಪಂಚನ ದುರ್ಮತಿಗಳ |ಯೋಗಕೊಲಿಯದಿಪ್ಪ ಧೀರನಭವಭಯವನು |ನೀಗಿಹರಿಯ ಸದನವ ತೋರ್ಪನಾ ವರದನ 2

ಕಲಿಮಲಾಪಹಾರ ಶಕ್ತನ, ಪ್ರಾಣೇಶ ವಿಠಲ |ನೊಲಿಸಿಕೊಂಡಮಿತ ಸಮರ್ಥನ ಮಾರುತ ಮತ ||ಜಲಧಿಪೆರ್ಚಿಸುತಿಹ ಚಂದ್ರನ ಬೃಹತ್ಸು ತಟ ನೀ |ನಿಲಯಶ್ರೀ ವಸುಧೇಂದ್ರ ಪುತ್ರನ ವಿರಕ್ತನ3
******