Showing posts with label ಮಧುರಾವೀಣಾ ಗಾನಾಲಂಕಾರ ಶ್ರೀ ಸುಧೀಂದ್ರಕರಸರೋಜ ಶೃಂಗಾರ sirigangakanaka. Show all posts
Showing posts with label ಮಧುರಾವೀಣಾ ಗಾನಾಲಂಕಾರ ಶ್ರೀ ಸುಧೀಂದ್ರಕರಸರೋಜ ಶೃಂಗಾರ sirigangakanaka. Show all posts

Monday, 6 September 2021

ಮಧುರಾವೀಣಾ ಗಾನಾಲಂಕಾರ ಶ್ರೀ ಸುಧೀಂದ್ರಕರಸರೋಜ ಶೃಂಗಾರ ankita sirigangakanaka

 ankita ಸಿರಿಗಂಗಾಕನಕ 

ರಾಗ: [ಸಾರಮತಿ] ತಾಳ: [ಆದಿ]


ಮಧುರಾವೀಣಾ ಗಾನಾಲಂಕಾರ ಶ್ರೀ

ಸುಧೀಂದ್ರಕರಸರೋಜಶೃಂಗಾರ


ನಿನ್ನ ಮಧುಕರ ಮಿಡಿವ ನಾದಲಹರಿ

ಮುನ್ನ ಸುಧೆಗರೆವುತಿದೆ ಶ್ರೀಹರಿ ಶ್ರೀಹರಿ ಅ ಪ


ಕೃಷ್ಣನ ಮಧುರಮೋಹಕರೂಪು

ಕೃಷ್ಣನೊಲವಿನ ಮುರಳಿ

ಕೃಷ್ಣನ ತಂಟೆತುಂಟಾಟಗಳೆಲ್ಲವ

ಕೃಷ್ಣಾ ಎಂದು ಕರೆದು ಕಂಡಿದ್ದೆ ವ್ಯಾಸತೀರ್ಥ 1

ಹರಿಯ ಒಲವಿನ ಕಂದ ಸಿರಿಯ 

ಮರುಳುಗೊಳಿಸಿ ಮಂಗಳೆಗೆ 

ವರವಿತ್ತ ಕರುಣಾಭರಣ

ಸರಿಗಮವ ನುಡಿಸುತಿಹ ನೀನೆ ಧನ್ಯ 2

ಹರಿಸರ್ವೋತ್ತಮನೆಂಬ ನಿನ್ನ ಗಾನಕ್ಕೆ 

ಸರಿಯುಂಟೆ ಮೂರುಲೋಕದೊಳಗೆ

ಸಿರಿಗಂಗಾಜನಕ ಮೆಚ್ಚಿ ಒಲಿದಿಹ ನಿನ್ನ ಈ-

ಪರಿ ಭಕುತಜನಕಚ್ಚರಿ 3

***

ಮಂಗಳೆಗೆÉ=ಶ್ರೀ ರಾಘವೇಂದ್ರಸ್ವಾಮಿಗಳ ಪೂರ್ವಾಶ್ರಮದ ಪತ್ನಿಗೆ;