RAO COLLECTIONS SONGS refer remember refresh render DEVARANAMA
..
ಮಂಗಳಂ ಮಂಗಳಂ ದಯಾಬ್ಧೆ ಜಯ
ಮಂಗಳಂ ಶ್ರೀರಂಗವೊಲಿದ ದಾಸಾರ್ಯ ಪ
ಪ್ರಹ್ಲಾದನನುಜ ತಾ | ಸಹ್ಲಾದ ವಿಖ್ಯಾತ
ಬಲ್ಲಿದ ಬಲ್ಲಾಳು ಶಲ್ಯ ನೃಪಾಲ 1
ನಾರದ ಗುರು ಭಾವಿ | ಮಾರುತ ಭೃಗು ವಿಘ್ನ
ದೂರಗೈಸುವ ರತಿ | ಕಾರುಣ್ಯಪಾತ್ರ 2
ಇಂದಿರಾಧವ ಶಾಮಸುಂದರ ಪ್ರಿಯ ಭಕ್ತ
ಮಂದಾರ ಮಾನವಿ ಮಂದಿರ ಧೀರ 3
***