Showing posts with label ಎಚ್ಚರಿಕೆಚ್ಚರಿಕೆ ಮನವೆ ಇನ್ನು ಎಚ್ಚರಿಕೆಚ್ಚರಿಕೆ ಯಮನ vijaya vittala. Show all posts
Showing posts with label ಎಚ್ಚರಿಕೆಚ್ಚರಿಕೆ ಮನವೆ ಇನ್ನು ಎಚ್ಚರಿಕೆಚ್ಚರಿಕೆ ಯಮನ vijaya vittala. Show all posts

Thursday 17 October 2019

ಎಚ್ಚರಿಕೆಚ್ಚರಿಕೆ ಮನವೆ ಇನ್ನು ಎಚ್ಚರಿಕೆಚ್ಚರಿಕೆ ಯಮನ ankita vijaya vittala

ಎಚ್ಚರಿಕೆಚ್ಚರಿಕೆ ಮನವೆ ಇನ್ನು |
ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ

ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ

ಗಂಡ ಅತ್ತೆ ಮಾವ ಮೈದುನರ ಬೈವರ |
ಖಂಡ ತುಂಡನೆ ಮಾಡಿ ಖಂಡವ ಕೊಯಿದು |
ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ |
ಮಂಡೆಯ ಒಡೆದು ಡಂಡದಿ ಶಿಕ್ಷಿಸಿ |
ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ
ಕುಂಡವ ಹೋಗಿಸುವರೊ-ಎದೆಯ ಮೇಲೆ |
ಗುಂಡನೆ ಹೊರಿಸುವರೊ-ಬಾಯೊಳಗೆ |
ಕೆಂಡವ ಸುರಿಸುವರೊ-ಕೋಟಿ ಜನ್ಮ
ಚಂಡಾಲ ಯೋನಿಯಳಿಟ್ಟು ಬಾಧಿಸುವರೊ 1

ಉತ್ತಮ ಗುರು ಹಿರಿಯರುಗಳ ಬೈವರ |
ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು |
ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ |
ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ
ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು |
ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ |
ಯುತ್ತುರುಳು ಹಾಕುವರೊ ಬೆನ್ನೊಳಗೇ |
ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ |
ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ 2

ಪರಧನ ಪರಸತಿ ಪರನಿಂದೆಗೆಳೆವರ |
ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ |
ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ |
ಜಿಹ್ವೆ ಕೊರೆದು ತೈಲದೊಳಗೆ |
ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ |
ಉರವಣಿಸು ಕುಣಿಸುವರೊ-ಹೆರೆದಂಬಿಗೆ |
ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ |
ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ |
ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ 3

ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ |
ತುಂಬಿ |
ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ |
ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- |
ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- |
ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ |
ಹಣ್ಣಣ್ಣು ಮಾಡುವರೊ-ಅಸೀಪತ್ರಾ- |
ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ |
ತುಂಬಿ ಕುಟ್ಟಿ ಮೆಲ್ಲಿಸುವರೊ4

ವಾಸುದೇವನ ವಾಸರದಲ್ಲಿ ಉಂಬರ |
ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- |
ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು |
ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು |
ತುಂಬಿ |
ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ |
ಹೇಸದೆ ಬಡಿಸುವರೊ ಹಂದಿಯಂತೆ |
ಈ ಶರೀರ ಸುಡಿಸವರೊ-ತಮಸಿನೊಳು |
ಏಸು ಜನ್ಮಕೆ ಗತಿಯಲ್ಲವೆನಿಸುವರೊ 5

ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ |
ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ |
ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ |
ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು |
ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- |
ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- |
ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು |
ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ |
ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ6

ಒಂದು ನೋಡಿದರೊಂದು ಅಧಿಕ ಪಾಪಗಳಿವೇ-
ನೆಂದು ಪೇಳಲಿ ಎನಗೊಂದಾದರಳವಲ್ಲ |
ಹಿಂದಿನ ದುರ್ವಾರ್ತೆ ಮರೆದು ಮುಂದಾದರು |
ನಂದತೀರ್ಥರ ಪಾದಾನಂದದಿ ಭಜಿಸಿ ಪು |
ರಂದರನನು ಸರಿಸಿ-ವಿಜಯವಿಠ್ಠಲ |
ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- |
ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | 7
*********