Showing posts with label ಕರೆದರೆ ಓ ಎನ್ನಬಾರದೆ ಲಕ್ಷ್ಮೀರಮಣ ಕರೆದರೆ ಓ purandara vittala KAREDARE O ENNABAARADE LAKSHMI RAMANA KAREDARE O. Show all posts
Showing posts with label ಕರೆದರೆ ಓ ಎನ್ನಬಾರದೆ ಲಕ್ಷ್ಮೀರಮಣ ಕರೆದರೆ ಓ purandara vittala KAREDARE O ENNABAARADE LAKSHMI RAMANA KAREDARE O. Show all posts

Thursday, 2 December 2021

ಕರೆದರೆ ಓ ಎನ್ನಬಾರದೆ ಲಕ್ಷ್ಮೀರಮಣ ಕರೆದರೆ ಓ purandara vittala KAREDARE O ENNABAARADE LAKSHMI RAMANA KAREDARE O



ಕರೆದರೆ ಓ ಎನ್ನಬಾರದೆ ||ಪ||

ಲಕ್ಷ್ಮೀರಮಣ, ಕರೆದರೆ ಓ ಎನ್ನಬಾರದೆ ||ಅ||

ಹಿರಣ್ಯಕನ ಉದರದಲ್ಲಿ ಬಂದ ಪ್ರಹ್ಲಾದನ
ಪರಿಪರಿ ದುರಿತಗಳೆಲ್ಲಾ ಪರಿಹರಿಸಿ ಕಾಯಿದಂಥಾ ಸ್ವಾಮಿ ||

ಭೀಮರಥಿಯೊಳಗೊಬ್ಬ ದಾಸ ಮುಣುಗಿ ಪೋಗಿರಲು
ಪೂಮಾಲೆ ಪೀತಾಂಬರವನು ತೋಯದೆ ಕಾಯಿದಂಥಾ ಸ್ವಾಮಿ ||

ಅಂತ್ಯಕಾಲ ಸಮಯದಲ್ಲಿ ಅರಿಯದೆ ಅಜಮಿಳನು
ಅಂತ್ಯಾ ಸುತನ ಕೂಗಲು ವೈಕುಂಠಪದವಿತ್ತಂಥ ಸ್ವಾಮಿ ||

ದುರುಳ ದುಶ್ಶಾಸ ಬಂದು ಸೆರಗ ಪಿಡಿದು ಸೆಳೆಯುವಾಗ
ತರುಣಿ ದ್ರೌಪದಿಯಭಿಮಾನವ ತ್ವರದಿ ಕಾಯಿದಂಥ ಸ್ವಾಮಿ ||

ಇಂತಿಂಥ ಭಕುತರಿಗೆ ಚಿಂತೆಯ ಪರಿಹರಿಸಿ
ಕಂತುಪಿತ ಪುರಂದರವಿಠಲನಿಂತು ಕಾಯಿದಂಥಾ ಸ್ವಾಮಿ ||
***

ರಾಕ ಖಮಾಚ್ ಆದಿತಾಳ

pallavi

karedare O enna bArade

anupallavi

lakSmI ramaa karedare O enna bArade

caraNam 1

hiraNyakana udaradalli banda prahlAdana paripari duritagaLellA pariharisi kAyidanthA svAmi

caraNam 2

bhramatiyoLobba dAsa muNugi pOgiralu pUmAle pItAmbaravanu tOyade kAyidanthA svAmi

caraNam 3

antyakAla samayadali ariyada ajamiLanu antyAsutana kUgalu vaikuNTha padavittantta svAmi

caraNam 4

duruLa dushyAsa bandu seraga piDidu seLeyuvAga taruNi draupadiyabhimAnava tvaradi kAyidantha svAmi

caraNam 5

indintha bhakutarige cinteya pariharisi kantupita purandara viTTala nintu kAyidanthA svAmi
***