ರಾಗ ಕಾಪಿ ಏಕತಾಳ
ಹಸಿವೆಯಾಗುತಿದೆ ಅಮ್ಮ ಕೇಳೆ
ಹಸನಾದ ಅವಲಕ್ಕಿ ಬೆಲ್ಲ ಕಲಸಿ ಕೊಡೆ ||ಪ||
ಬಿಸಿ ಬಿಸಿ ಅನ್ನ ಕೈ ಸುಡುತಿದೆ ಬದಿಯಲ್ಲಿ ಕೂಡೆ ||ಅ||
ಖಾರ ಸಾರು ಮಾಡಬೇಡ ಉಣ್ಣಬಾರೆನೆ, ಎನಗೆ
ಸೀಸಾರು ಮಾಡಿದರೆ ಬೇಗನುಂಬುವೆ ||
ತೋಡ ತುಪ್ಪ ಹಾಕಿದರೆ ನೆಲಕೆ ಒತ್ತುವೆ, ಎನಗೆ
ಗಟ್ಟಿ ತುಪ್ಪ ಹಾಕಿದರೆ ಬೇಗ ನುಂಗುವೆ ||
ನೀರು ಮೊಸರು ಹಾಕಿದರೆ ನೆಲಕೆ ಎತ್ತುವೆ, ಎನಗೆ
ಗಟ್ಟಿ ಮೊಸರು ಹಾಕಿದರೆ ತಟ್ಟನುಂಗುವೆ ||
ತಟ್ಟನೇಳೊ ಕೃಷ್ಣರಾಯ ಬಟ್ಟಲು ತೊಳೆದೇನು, ನಿನಗೆ
ಉಕ್ಕುವ ಹಾಲಿನ ಕೆನೆಯ ಕೈಯಲಿ ಕೊಟ್ಟು ಕಳುಹುವೆನು ||
ಕಂದರೆಲ್ಲ ಕರೆಯ ಬಂದರಮ್ಮ ಕೇಳೆ, ಬಾಳೆ-
ಹಣ್ಣು ಬೆಲ್ಲ ಚೂರು ಕೈಯಲ್ಲಿ ಕೊಡೆ ||
ಕಂದರೆಲ್ಲ ಕರೆಯ ಬಂದರು ತಾಯಿ ಕೇಳೆ, ಸಕ್ಕರೆ
ಕೊಬ್ಬರಿಯ ಕುಟ್ಟಿ ಸೆರಗಿಲಿ ಹಾಕೆ ||
ವೃಂದಾವನದೊಳಗೆ ಬಂದು ಅಮ್ಮ ಕೇಳೆ, ಬಲು
ಚಂದದ ಗೊಂಬೆಯ ಹೂಡಿ ಕಟ್ಟಿ ಕೊಡೆ ||
ಒಳಗೆ ಆಡು ಒಳಗೆ ಆಡು ಬಾರೋ ರಂಗ, ಅಲ್ಲಿ
ಹೊರಗೆ ಬೂಚಿಮುಖದ ಹುಲಿ ತಿರುಗುತಿದೆ ||
ಓಡಿ ಬಾರೊ ಓಡಿ ಬಾರೊ ಪುರಂದರವಿಠಲ, ಅಲ್ಲಿ
ಆಡಿನ ಮುಖದ ಹುಲಿ ತಿರುಗುತಿದೆ ||
***
ಹಸಿವೆಯಾಗುತಿದೆ ಅಮ್ಮ ಕೇಳೆ
ಹಸನಾದ ಅವಲಕ್ಕಿ ಬೆಲ್ಲ ಕಲಸಿ ಕೊಡೆ ||ಪ||
ಬಿಸಿ ಬಿಸಿ ಅನ್ನ ಕೈ ಸುಡುತಿದೆ ಬದಿಯಲ್ಲಿ ಕೂಡೆ ||ಅ||
ಖಾರ ಸಾರು ಮಾಡಬೇಡ ಉಣ್ಣಬಾರೆನೆ, ಎನಗೆ
ಸೀಸಾರು ಮಾಡಿದರೆ ಬೇಗನುಂಬುವೆ ||
ತೋಡ ತುಪ್ಪ ಹಾಕಿದರೆ ನೆಲಕೆ ಒತ್ತುವೆ, ಎನಗೆ
ಗಟ್ಟಿ ತುಪ್ಪ ಹಾಕಿದರೆ ಬೇಗ ನುಂಗುವೆ ||
ನೀರು ಮೊಸರು ಹಾಕಿದರೆ ನೆಲಕೆ ಎತ್ತುವೆ, ಎನಗೆ
ಗಟ್ಟಿ ಮೊಸರು ಹಾಕಿದರೆ ತಟ್ಟನುಂಗುವೆ ||
ತಟ್ಟನೇಳೊ ಕೃಷ್ಣರಾಯ ಬಟ್ಟಲು ತೊಳೆದೇನು, ನಿನಗೆ
ಉಕ್ಕುವ ಹಾಲಿನ ಕೆನೆಯ ಕೈಯಲಿ ಕೊಟ್ಟು ಕಳುಹುವೆನು ||
ಕಂದರೆಲ್ಲ ಕರೆಯ ಬಂದರಮ್ಮ ಕೇಳೆ, ಬಾಳೆ-
ಹಣ್ಣು ಬೆಲ್ಲ ಚೂರು ಕೈಯಲ್ಲಿ ಕೊಡೆ ||
ಕಂದರೆಲ್ಲ ಕರೆಯ ಬಂದರು ತಾಯಿ ಕೇಳೆ, ಸಕ್ಕರೆ
ಕೊಬ್ಬರಿಯ ಕುಟ್ಟಿ ಸೆರಗಿಲಿ ಹಾಕೆ ||
ವೃಂದಾವನದೊಳಗೆ ಬಂದು ಅಮ್ಮ ಕೇಳೆ, ಬಲು
ಚಂದದ ಗೊಂಬೆಯ ಹೂಡಿ ಕಟ್ಟಿ ಕೊಡೆ ||
ಒಳಗೆ ಆಡು ಒಳಗೆ ಆಡು ಬಾರೋ ರಂಗ, ಅಲ್ಲಿ
ಹೊರಗೆ ಬೂಚಿಮುಖದ ಹುಲಿ ತಿರುಗುತಿದೆ ||
ಓಡಿ ಬಾರೊ ಓಡಿ ಬಾರೊ ಪುರಂದರವಿಠಲ, ಅಲ್ಲಿ
ಆಡಿನ ಮುಖದ ಹುಲಿ ತಿರುಗುತಿದೆ ||
***
pallavi
hasiveyAgutide amma kELe hasanAda avalakki bella kalasi koDe
anupallavi
bisi bisi anna kai suDutide badiyalli kUDe
caraNam 1
khARa sAru mADa bEDa uNNarAlene enage sIsAru mADidare bEgenumbuve
caraNam 2
tODa tuppa hAkidare nelake ottuve enage gaTTi tuppa hAkidare bEga nunguve
caraNam 3
nIru mosaru hAkidare nelake ettuve enage gaTTi mosaru hAkidare taTTa nunguve
caraNam 4
taTTanELo krSNarAya baTTalu toLadEnu ninage ukkuva hAlina keneya kaiyali koTTu kaLuhuvenu
caraNam 5
kandarella kareya bandharamma kELe bALe haNNu bella cUru kaiylli koDe
caraNam 6
kandarella kareya bandaru tAyi kELe sakkare kobbariya kuTTi seragili hAke
caraNam 7
vrndAvanadoLge bandu amma kELe balu candada gombeya hUDi kaTTi koDe
caraNam 8
oLage ADu oLage ADu bArO ranga alli horage bUci mukhada huli tirugutide
caraNam 9
Odi bAro Odi bAro purandara viTTala alli Adina mukhada huli tirugutide
***