Showing posts with label ಸೋಮರವಿ ಭಾಸಕನೆ ರಾಮ ಕಪಿಲನೆ ನಿನ್ನ prasannashreenivasa. Show all posts
Showing posts with label ಸೋಮರವಿ ಭಾಸಕನೆ ರಾಮ ಕಪಿಲನೆ ನಿನ್ನ prasannashreenivasa. Show all posts

Thursday, 5 August 2021

ಸೋಮರವಿ ಭಾಸಕನೆ ರಾಮ ಕಪಿಲನೆ ನಿನ್ನ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ರಾಮಕಪಿಲ


ಸೋಮರವಿ ಭಾಸಕನೆ ರಾಮ ಕಪಿಲನೆ ನಿನ್ನ

ತಾಮರ ಸಪದಯುಗಳಕಾ ನಮಿಪೆ ಕಾಯೊ ಪ


ಹೇಮಗರ್ಭನ ತಾತ ಭಾಮೆ ಭೈಷ್ಮಿಯ ರಮಣ

ವಾಮ ಚಿತ್ಸುಖಕಾಯ ಅಮರಗುಣಪೂರ್ಣ ಅಪ


ಶ್ರೀಕರನೆ ಸುಖಮಯನೆ ಲೋಕಪಾಲಕ ಸ್ವಾಮಿ

ಸ್ವೀಕರಿಸೊ ಈ ಸೇವೆ ಭಕುತಜನಪ್ರಿಯ

ನಾಕ ಭುವಿ ಪಾತಾಳ ಲೋಕಂಗಳಲಿ ವ್ಯಾಪ್ತ

ಏಕಕಾರಣ ಸಾಕ್ಷಿಸುಖ ಸಾರಭೋಕ್ತಾ 1

ಭೂರಮಣ ಸಾರಾತ್ಮ ನೀ ರಮಿಪೆ ನಿನ್ನೊಳಗೆ

ಮಾರ ಕಮಲಜತಾತ ಶರಣು ಶರಣಾದೆ

ಹಾರ ಅರಿಶಂಖಾಬ್ಜ ಭಾರಿಗದೆ ಚಾಪಧರ

ಘೋರತರ ಭಯಹಾರಿ ನಾರಸುರಸೇವ್ಯ 2

ನೋಡಬೇಕೆಲೊ ನಿನ್ನ ಮೂಢಮನೋತಿಮಿರಾರ್ಕ

ಬಾಢವೆನ್ನುತ ಬೇಗ ನೋಡೆನ್ನ ದಯದಿ

ಪಾಡಿ ಪೊಗಳುವೆ ನಿನ್ನ ಈಡು ಇಲ್ಲದ ವಿಶ್ವ

ಮೂಡಲ ಸುನಗವಾಸ ಪ್ರಸನ್ನ ಶ್ರೀನಿವಾಸ 3

***