Showing posts with label ಇದರೆನ್ನಧಿಕ ಸುಖವೊಂದವೊಲ್ಲೆ ಪದುಮನಾಭನೆ pranesha vittala. Show all posts
Showing posts with label ಇದರೆನ್ನಧಿಕ ಸುಖವೊಂದವೊಲ್ಲೆ ಪದುಮನಾಭನೆ pranesha vittala. Show all posts

Friday, 8 November 2019

ಇದರೆನ್ನಧಿಕ ಸುಖವೊಂದವೊಲ್ಲೆ ಪದುಮನಾಭನೆ ankita pranesha vittala

by ಪ್ರಾಣೇಶದಾಸರು
ಇದರೆನ್ನಧಿಕ ಸುಖವೊಂದವೊಲ್ಲೆ ಪದುಮನಾಭನೆ 
ನಿನ್ನ ಪಾದಯುಗ್ಮವೆ ಸಾಕ್ಷಿ ಪ

ಮಧ್ವ ಮತದೊಳಗೆ ಜನಿಸಿ ದ್ವಾದಶನಾಮ |
ಮುದ್ರೆ ಶ್ರೀ ತುಲಸಿ ಅಕ್ಷಮಾಲೆ ಧರಿಸಿ ||
ಶುದ್ಧ ಗ್ರಂಥವನೋದಿ ಅದ್ವೈತರನು ಹಳಿದು |
ಸದ್ವೈಷ್ಣವನೆಂದೆನ್ನಿಸಿಕೊಂಡರೆ ಸಾಕು 1

ಹಿರಿಯರಾದವರಿಗೆ ಬಾಗಿ, ದಾನವ ಮಾಡಿ |
ನಿರುತ ಸತ್ಕಥೆಗಳ ಕೇಳುತಲಿ ||
ವರಮಂತ್ರ ಜಪಿಸುತ ಪಂಚಯಜÕವ ಮಾಡಿ |
ಹರಿದಿನ ವ್ರತವನು ನಡೆಸುತಿಪ್ಪುದೆ ಸಾಕು 2

ಪ್ರಾಣೇಶ ವಿಠಲ ನೀನೇ ಸರ್ವೋತ್ತಮ, ಬ್ರಹ್ಮ- |
ಪ್ರಾಣಾದಿಗಳು ನಿನ್ನ ದಾಸರೆಂಬ ||
ಜ್ಞಾನವೆ ಗಳಿಸಿ ವೈಷ್ಣವರ ಮನೆಯ ಬಾಗಿ - |
ಲನು ನಿರುತ ಕಾಯ್ದು ಜೀವಿಸುವದೇ ಸಾಕು 3
******