Showing posts with label ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ gopala vittala. Show all posts
Showing posts with label ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ gopala vittala. Show all posts

Thursday, 12 December 2019

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ ankita gopala vittala

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ
ಕುಪಿತರಾದರೆ ಕೇಳೆ ಅಪ್ರಾಪ್ತರು                          ।।ಪ॥

ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆ
ನಿರಯವೇ ಪ್ರಾಪ್ತಿ ಸಂದೇಹವಿಲ್ಲ
ಹಿರಿದು ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲು
ಭರದಿ ಹೊಳೆದಾಟಿ ತಾ ದಾರಿಯ ಸೇರುವನೆ          ।।೧।।

ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿ
ಎಷ್ಟು ಮಾಡಿದರು ಗತಿಪೊಂದುವನೆ
ಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆ
ಎಷ್ಟು ಸುಖ ಐದುವನು ನಷ್ಟವಿಲ್ಲದೆ                       ।।೨।।

ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆ
ಪರಮಪದ ದೊರಕುವುದೆ ಮರುಳನಲ್ಲದೆ
ಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿ
ಶರಧಿಯನು ದೂಷಿಸಲು ಹರುಷಬಡುವುದೆ             ।।೩।।

ಹರನ ದ್ವೇಷವ ಮಾಡಿ ಪೂಜೆಯ ಮಾಡೆ
ಪರಮಗತಿಯಾಗುವುದೆ ಪತಿತನಿಗೆ
ಹರವಿಯಿಲ್ಲದ ಪಾಕ ಕರವಿಟ್ಟು ಕಲಸಿದರೆ
ವರ ಭೋಜನವು ಅವಗೆ ಒದಗಿ ಆಗುವುದೆ              ।।೪।।

ದೇವನಿಗೆ ಕರ್ತೃತ್ವ ಉಂಟು ಎಂದವ ಗೆದ್ದ
ದೇವನಲ್ಲದೆ ಜೀವನೆನಲು ಬಿದ್ದ
ಪಾವನ್ನಮೂರುತಿ ಗೋಪಾಲವಿಠಲನಂಘ್ರಿ
ಸೇವಕಗೇನು ಗತಿ ಅದವರಿಗೆ ಆಗಲಿ                     ।।೫।।
****

Apta matidu nija prapta janake
Kupitaradare kele apraptaru ||pa||

Hariya pujisi necci parivara bittare
Nirayave prapti sandehavilla
Hiridu harigola nambi kirid~huttugala bidalu
Baradi holedati ta dariya seruvane ||1||

Krushnanalli dvesha narayananalli Bakuti
Eshtu madidaru gatiponduvane
Sittinalli sarpana tuti tudiya civutidare
Eshtu suka aiduvanu nashtavillade ||2||

Hariyalli dvesha haranalli Bakuti madidare
Paramapada dorakuvude marulanallade
Saradhi asrayisidda maccana balamadi
Saradhiyanu dushisalu harushabaduvude ||3||

Harana dveshava madi pujeya made
Paramagatiyaguvude patitanige
Haraviyillada paka karavittu kalasidare
Vara bojanavu avage odagi Aguvude ||4||

Devanige kartrutva untu emdava gedda
Devanallade jivanenalu bidda
Pavannamuruti gopalavithalanangri
Sevakagenu gati adavarige Agali ||5||
****