Showing posts with label ಸಂತಚರಿಯ ಗೂಢಾ ತಿಳಿಯದು ಭ್ರಾಂತರಿಗಿದು ನೋಡಾ gurumahipati. Show all posts
Showing posts with label ಸಂತಚರಿಯ ಗೂಢಾ ತಿಳಿಯದು ಭ್ರಾಂತರಿಗಿದು ನೋಡಾ gurumahipati. Show all posts

Wednesday, 1 September 2021

ಸಂತಚರಿಯ ಗೂಢಾ ತಿಳಿಯದು ಭ್ರಾಂತರಿಗಿದು ನೋಡಾ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು

ಸಂತಚರಿಯ ಗೂಢಾ | ತಿಳಿಯದು | ಭ್ರಾಂತರಿಗಿದು ನೋಡಾ ಪ 

ವೇಷವ ಸಂತರು ದೋರುವದಿಲ್ಲಾ | ಆಶಾಪಾಶಕ ಶಿಲಕುವರಲ್ಲಾ 1 
ಹೊರಗಾಚರಿಯು ಲೋಕದ ಸರಿಯಾ | ಇರುತಿಹ ಏನೇನರಿಯದ ಪರಿಯಾ 2 
ವಿಷಯ ರೂಪವ ಬ್ರಹ್ಮ ಭಾವನೆ ಬಗೆವಾ | ಪರಿ ಕೇಡಿಹ ಜಗವಾ 3 
ತೋರನು ವಾಗ್ವಿಸ್ತಾರ ಬಹಳಾ | ಮೀರಿನೆರಿಹಿಕೊಳ್ಳ ಡಿಂಗರ ಮೇಳಾ 4 
ದಾವ ಮಾನವರೆಂದು ಸಂತರ ತಿಳಿವಾ | ರವರವ ನರಕದ ಕುಂಡದಲಿಳಿವಾ 5 
ಕೋಟ್ಯಾನುಕೋಟಿಗೊಬ್ಬಿಹನು ಸಾಧು | ಸಾಟಿಲ್ಲವರಿಗೆ ಧರಿಯೊಳಗಿಂದು 6 
ಮಹಿಪತಿನಂದನ ಪ್ರಭುವಿನ ದಯವಿನಾ | ಮಹಿಮೆಯ ತಿಳಿಯದು ಹೇಳಲಿನ್ನೇನಾ 7

***