..
ಕಂಡೆ ಕನಸಿನಲಿ ಕಾರುಣ್ಯ ಮೂರುತಿ ಹರಿಯ ಪ
ಪುಂಡರೀಕಾಕ್ಷ ಪುರುಷೋತ್ತಮನ ಸಿರಿಯ ಅ.ಪ
ಚಂಡು ರನ್ನದ ತಾಯ್ತಿ ಮಲುಕು ಅರಳೆಲೆ
ಹೊನ್ನಗೊಂಡೆಗಳ ಬಿಗಿದ ಶಿಖಿ ದಾರದೆಡೆಯ
ದುಂಡು ಮಲ್ಲಿಗೆಯ ಪರಿಮಳವು ಘಮಘಮಿಪ ಅಳಿ-
ವಿಂಡುಗಳ ಜರಿವಂಥ ಸುಳಿಗುರುಳಿನಿರವ1
ಶಶಿವದನ ನಯನ ನಾಸಾಪುಟದ ಚಲುವಿಕೆಯ
ನೊಸಲ ಸಿರಿ ನಾಮ ಕಸ್ತೂರಿ ತಿಲಕದಎಸೆವ
ಕುಡಿ ಹುಬ್ಬುಗಳ ಕುಂಡಲದ ಕಾಂತಿಗಳದÉಸೆದೆಸೆಗೆ
ಬೆಳಗುತಿಹ ವರದೀಪ್ತಿಗಳನು 2
ಕೆತ್ತನೆಯ ಪದಕೆ ಕೆಲಬಲಕೆ ಒಲಿದಾಡುತಿಹ
ಮುತ್ತು ಮಾಣಿಕದ ಹುಲಿಯುಗುರು ಸರದ
ಚಿತ್ತಾರದ ಹೊನ್ನ ಬಂದಿಯ ಯಣ್ಣೆ ಮಣಿ
ಇದರ ಒತ್ತಿನಲಿ ಶಿರಿವತ್ಸ ವೈಯಾರದಿರವ 3
ತÉೂೀಳ ಬಳೆ ತಾಯ್ತಿ ಕಡಗ್ಹವಳ
ಕಂಕಣವಾಕು ನೀಲ ಮಾಣಿಕ್ಯದ ಬೆರಳುಂಗುರಗಳ
ಸಾಲು ಗಂಟೆಗಳ ರಂಜಿಸುವ ಕಾಂತಿಗಳ ಈ-
ರೇಳು ಭುವನಗಳ ಧರಿಸಿದ ಉದರವನು 4
ಬಟ್ಟದೊಡೆಗಳಿಗೆ ಬಿಗಿದುಟ್ಟ ಚಲ್ಲಣ ಮೈಯ
ತೊಟ್ಟ ಜರತಾರದಂಗಿಯ ಚರಣದಿ
ಕಟ್ಟಿರುವ ಗೆಜ್ಜೆ ಸರಪಣಿ ಕಾಲ ಕಡಗಗಳ
ದಟ್ಟಡಿಯನಿಡುತ ಬಹ ಪುಟ್ಟ ಗೋಪಾಲಕನ 5
ಬಾಲಕನು ಕರೆಯೆ ಬಹು ಕಂಬದಲಿ ಬಂದೊಡೆದು
ಬಾಲಕನ ತರಿದು ಸಾಂದೀಪಗಿತ್ತ
ಬಾಲೆ ಚೀರಿದರೆ ಅಕ್ಷಯವಿತ್ತ ದೇವಕಿಯ
ಬಾಲಕನ ಬಹು ಬಗೆಯ ಲೀಲೆಗಳನೆಲ್ಲ 6
ಪೊಗಳಲೆನ್ನಳವಲ್ಲ ಪೊಸಬಗೆಯ ಮಹಿಮೆಗಳ
ಅಘಹರನ ಅಗಣಿತದ ಗುಣ ಗಣಗಳ
ನಿಗಮ ನಿಕರಕೆ ಮೈಯಗೊಡದ ಉಡುಪಿನ ಕೃಷ್ಣ
ನೊಗುಮಿಗೆಯ ಉನ್ನತದ ವೈಯಾರಗಳನು 7
***