Showing posts with label ನಿನ್ನ ಮರೆದಿಹ ಜನಕೆ ಮಂಗಳವು ಎಂತೋ jayesha vittala. Show all posts
Showing posts with label ನಿನ್ನ ಮರೆದಿಹ ಜನಕೆ ಮಂಗಳವು ಎಂತೋ jayesha vittala. Show all posts

Thursday, 5 August 2021

ನಿನ್ನ ಮರೆದಿಹ ಜನಕೆ ಮಂಗಳವು ಎಂತೋ ankita jayesha vittala

 ..

ನಿನ್ನ ಮರೆದಿಹ ಜನಕೆ ಮಂಗಳವು ಎಂತೋ ಪ


ಪೂರ್ಣಮಂಗಳ ಶರಧಿ ಗೋಪಾಲ ಚಿನ್ಮಯನೆ ಅ.ಪ


ಎದೆ ಭುಗಿಲು ಎನ್ನುವುದು ಮದದ ಮನುಜರ ನೋಡಿ

ವಿಧಿ ಬರಹ ತಿಳಿಯದೆ ಸರ್ವಜ್ಞರಂತೆ

ಮದ ಮತ್ಸರದಿಂದ ಆಯುವ ಕಳೆಯುತ ಮೋದ

ಪದವಿ ಬಯಸುವ ಮನುಜ ಪಶುರಾಸಿ ನೋಡಯ್ಯ 1


ತನ್ನಾದಿ ಕೊನೆಗಾಣ ಘನ್ನ ಮೋಹದಿ ಮೆರೆವ

ಭಿನ್ನ ಸುಖಮೂಲನ್ನ ಸ್ವಪ್ನದಲಿ ಅರಿಯ

ತನ್ನ ವಶಮೀರಿ ಬಹು ಸುಪ್ತಿಯಲಿ ಪೊಂದುವ

ಇನ್ನು ಮರಿಯನು ಮನುಜ ತನ್ನ ಸ್ವಾತಂತ್ರ್ಯವ 2


ನಿರುತ ಮೃತ್ಯೋವದನ ಸ್ಥಿತನಾಗಿ ಭೋಗಗಳ

ಪರಿಪರಿ ಹಾರೈಪÀ ಸತತ ಬಿಡದೆ

ಬರದು ಬಯಸಿದ ಸುಖವು ಒತ್ತಿ ಬರುವುದು ದುಃಖ

ಮರತು ಈ ಪರಿಸ್ಥಿತಿಯ ಕರ್ತ ನಾನೆಂಬುವನು 3


ಅe್ಞÁನ ತಿಮಿರದಲಿ ಪ್ರಾಜ್ಞ ತಾನೆಂಬುವನು

ಸುe್ಞÁನ ಪಥ ಸುದ್ದಿ ಸ್ವಪ್ನದಲಿ ಅರಿಯ

ಜಿe್ಞÁಸೆಗ್ಹೊತ್ತಿಲ್ಲ ಭವಪ್ರವಹ ಪೊಂದಿಹನು

ಪ್ರಜ್ಞೆ ಇಲ್ಲದ ಪ್ರಾಜ್ಞಗೆಂತಹುದೊ ಶುಭಪ್ರಾಪ್ತಿ 4


ರೋಗರುಜಿನದಿ ಜೀವವಾಗರವೆ ವಿರೂಪಹುದು

ಬಾಗನೊ ಭಗವಂತಗಂಜಿ ಮೂಢ

ಯೋಗೀಶರೊಂದ್ಯ ಶ್ರೀ ಜಯೇಶವಿಠಲ

ಹ್ಯಾಗಪ್ಪ ಈ ಜನಕೆ ಕಲ್ಯಾಣಸಂಪದವು 5

***