Showing posts with label ನಾರಾಯಣ ನಮ್ಮ ಈತ ನಾರಿ ಒಳ್ಳೊಳ್ಳೆ helavana katte. Show all posts
Showing posts with label ನಾರಾಯಣ ನಮ್ಮ ಈತ ನಾರಿ ಒಳ್ಳೊಳ್ಳೆ helavana katte. Show all posts

Tuesday, 1 June 2021

ನಾರಾಯಣ ನಮ್ಮ ಈತ ನಾರಿ ಒಳ್ಳೊಳ್ಳೆ ankita helavana katte

 ನಾರಾಯಣನಮ್ಮ ಈತ

ನಾರಿ ಒಳ್ಳೊಳ್ಳೆ[ಯ]ವರಿಗೆ ಮಾಡಿದ ಖ್ಯಾತ ಪ.


ನಾನಾ ಬಗೆಯಿಂದ ಪೊಗಳುವೆನೀತ-

ನ್ನಾನೆಂಬುವುದನ್ನು ಮುರಿದ ಪ್ರಖ್ಯಾತ ಅ.ಪ.


ಕೈಕಾಲಿಲ್ಲದೆ ಆಟ ಆಡಿದ

ಮೈಮ್ಯಾಲೆ ಹೊರೆಯ ಹೊತ್ತು ನೋಡಿದ

ಕೋರೆಯ ಮಸೆದು ಹದ ಮಾಡಿದ

ಕೋಯೆಂದು ಕೂಗಿ ಒದರುತೋಡಿದ

ಇವ ಭಕ್ತರನ್ನ ಪಾತಾಳಕ್ಕೆ ದೂಡಿದ

ಶಕ್ತಿ ಮಗನಾದ ಕ್ಷತ್ರಿಯರ ಕಾಡಿದ

ರಾವಣನಿಗೆ ಅಂಬು ತೆಗೆದು ಹೂಡಿದ

ರಾಧಾನ್ಮನೆ ಪೊಕ್ಕು ಮೋಜು ಮಾಡಿದ

ಇವ ದಿಗಂಬರನಾಗಿ ಅಶ್ವವೇರಿ ಓಡಿದ 1


ಕಳ್ಳಗಿಂತ ಮಹಾಕಳ್ಳ

ಕಲ್ಲು ಮಾಡಿಕೊಂಡು ಇರುವನು ನೆಳ್ಳ

ಭೂಮಿ ನೆಗವಿ ಸುತ್ತಿ ಬಲ್ಲ

ಬುದ್ಧಿವಂತ ಪ್ರಹ್ಲಾದಗೊಲಿದನಲ್ಲ

ಇವ ಎರುಡುಪಾದ ಭೂಮಿ ದಾನ ಒಲ್ಲ

ಇವನ ಕೊಡಲಿಬಾಯಿಗ್ಯಾರು ಇದಿರಿಲ್ಲ

ಲಂಕೆಗೆ ಬೆಂಕಿಯನಲ್ಲ

ಕೊಂಕಿ ಕೊಳಲನೂದುವನು ಗೊಲ್ಲ

ಮೈಮೇಲೆ ಗೇಣು ಅರಿವ್ಯಿಲ್ಲ

ಇವ ಮಾಮೇರೆಂಬೊ (?) ತೇಜಿ ಏರ್ಯಾನಲ್ಲ 2


[ಬಿಟ್ಟ ಕಣ್ಣ] ಕಂಡ ವೈರಿ ಕೊಂದ

ಕಾಮಾತ್ಮರಿ[ಗಾ]ಗೋದೇನು ಛಂದ

ದಾಡೆಯಿಂದ ದೂಡಿ ಭೂಮಿ ತಂದ

ದಾಡೆಯಿಂದ ಕಂಬ ಒಡೆದು ಬಂದ

ಇವ ಶುಕ್ರನ್ನ ಕಣ್ಣ ಮುರಿದೊಂದ

ತಂದೆ ಮಾತಿಗೆ ತಾಯಿ ಮರಣಂದ

ವನದ್ಹಿಂಡು ಕೂಡಿ ವನಕೆ ಕೇಡು ತಂದ

ಒಮ್ಮೆ ಮೀಸಲ್ಬೆಣ್ಣೆ ಮೆದ್ದೇನಂದ

ಇವ ಬತ್ತಲಾಗಿ ಹತ್ತು ಕುದುರಿದಂದ

ತಂದೆ ಹೆಳವನಕಟ್ಟೆರಂಗ ಬಂದ 3

****