ankita ಸಿರಿನಾರಾಯಣ
ರಾಗ: ತೋಡಿ ತಾಳ: ರೂಪಕ
ವೃಂದಾವನ ರೂಪ ವರ
ವೃಂದಾರಕ ವೃಂದ ಸನ್ಮಂದಿರ ಶ್ರೀ ಪ
ಸತ್ಯಧರ್ಮ ಸುಮತ ನಿರತ
ನಿತ್ಯಮಂಗಲ ಕಾರ್ಯ ಚರಿತ
ಭೃತ್ಯಜನಕಾನಂದಭರಿತ
ಸ್ತುತ್ಯ ಪುಣ್ಯ ಶ್ಲೋಕ ಮಹಿತ 1
ಕಾಮಿತಪ್ರದ ಕರುಣಾರ್ಣವ
ಸ್ವಾಮಿ ಭಕುತರ ಭವ ತಾಪವ
ಹೋಮಿಸುವ ಸ್ವಪುಣ್ಯ ಪ್ರಭಾವ
ಸೀಮರಹಿತ ಸಂಯಮಿ ಸುದೇವ 2
ನಾನಾಮಯ ರೋಗ ನಿತ್ಯದಿ ನಿವಾರಕ
ಜ್ಞಾನ ಪೂರ್ಣ ಮಧ್ವಮತೋದ್ಧಾರಕ
ಧ್ಯಾನ ಮಂತ್ರದಿ ಭವಸಂತಾರಕ
ದಾನಶೂರ ಸಿರಿನಾರಾಯಣ ಸೇವಕ 3
***