Monday 6 September 2021

ವೃಂದಾವನ ರೂಪ ವರ ವೃಂದಾರಕ ವೃಂದ ಸನ್ಮಂದಿರ ಶ್ರೀ ankita sirinarayana

ankita ಸಿರಿನಾರಾಯಣ

ರಾಗ: ತೋಡಿ ತಾಳ: ರೂಪಕ


ವೃಂದಾವನ ರೂಪ ವರ

ವೃಂದಾರಕ ವೃಂದ ಸನ್ಮಂದಿರ ಶ್ರೀ


ಸತ್ಯಧರ್ಮ ಸುಮತ ನಿರತ

ನಿತ್ಯಮಂಗಲ ಕಾರ್ಯ ಚರಿತ

ಭೃತ್ಯಜನಕಾನಂದಭರಿತ

ಸ್ತುತ್ಯ ಪುಣ್ಯ ಶ್ಲೋಕ ಮಹಿತ 1

ಕಾಮಿತಪ್ರದ ಕರುಣಾರ್ಣವ

ಸ್ವಾಮಿ ಭಕುತರ ಭವ ತಾಪವ

ಹೋಮಿಸುವ ಸ್ವಪುಣ್ಯ ಪ್ರಭಾವ

ಸೀಮರಹಿತ ಸಂಯಮಿ ಸುದೇವ 2

ನಾನಾಮಯ ರೋಗ ನಿತ್ಯದಿ ನಿವಾರಕ

ಜ್ಞಾನ ಪೂರ್ಣ ಮಧ್ವಮತೋದ್ಧಾರಕ

ಧ್ಯಾನ ಮಂತ್ರದಿ ಭವಸಂತಾರಕ

ದಾನಶೂರ ಸಿರಿನಾರಾಯಣ ಸೇವಕ 3

***


No comments:

Post a Comment