Raga: Dwijavanti Tala: khanda Chapu
ನಲಿದಾಡೆ ಎನ್ನ ನಾಲಿಗೆ ಮೇಲೆ - ಶಾರದಾ ದೇವಿ
ಕುಣಿದಾಡೇ ಎನ್ನ ನಾಲಿಗೆ ಮೇಲೆ//
ಘಿಲು ಘಿಲು ಘಿಲು ಗೆಜ್ಜೆಯ ನಾದ ಪೊಳೆವ ಅಂದುಗೆ
ರುಳಿ ಪೈಜಣವಿಟ್ಟು ಪುಟ್ಟ ಪಾದ ಸುರವರನುತ ಪಾದ
ಸರಸಿಜೋದ್ಭವನ ವದನ ನಿಲಯಳೆ
ಕರುಣದಿಂದ ಪರಿಪಾಲಿಸು ಮಾತೆ.//೧//
ನಸುನಗೆ ಮುಖವು ನಾಸಾಭರಣ - ಎಸೆವ ಕಪೋಲ
ಹೊಸ ಮುತ್ತಿನ ಚಳ್ಳತುಂಬಿಟ್ಟಾ ಶ್ವವಣ
ತಿಲಕವು ಹಸನ ಶಶಿಸೂರ್ಯರ ಆಭರಣ ಶೋಭಿತಳೆ
ಕುಸುಮ ಮುಡಿದ ಮೂರ್ಧಜವುಳ್ಳವಳೇ///೨//
ಶೃಂಗಾರ ವಾದ ಜಡೆ ಬಂಗಾರ ರಾಗುಟಿ ಚೌರಿ
ಹೊಂಗ್ಯಾದಿ ಗೊಂಡೆ ಮುತ್ತಿನ ಹಾರ ರಂಗು ಮನೋಹರ/
ಮಂದಗಮನೆ ಅರವಿಂದ ನಯನೆ ಶ್ರೀ
ರಂಗವಿಠಲನ ತೋರೆ ಶುಭಾಂಗೀ.//೩//
****
****
Nalidaade enna naalige mele shaaradaa devi |
kunidaade enna naalige mele || pa ||
Ghilu ghilu ghilu gejjeya naada | poleva anmduge ruli paijanavitta putta paada |
sarasijodbhavana vadana nilayale karunadinda paripaalisu maate || 1 ||
Nasunage mukhavu naasaabharana | eseva kapola | hosa muttina chala tumbitta shravana |
tilakavoo hasana | shashi sooryara aabharana shobhitale | kusuma mudida moordhwajavullavale || 2 ||
Shrungaaravaada jade bhangaara | raaguti chouri | hongyaadige gonde muttina haara |
rangu manohara mandagamane aravinda nayane siri | rangaviththalana tore shubhaangi || 3 ||
***