Showing posts with label ಶ್ರೀಕಾಂತ ವಿಠ್ಠಲ ತವ ಸೇವಕನಾ ದಿವನ ನೀ ಕಾಪಾಡಿ ಸಲಹೋ uragadri vittala srikanta vittala stutih. Show all posts
Showing posts with label ಶ್ರೀಕಾಂತ ವಿಠ್ಠಲ ತವ ಸೇವಕನಾ ದಿವನ ನೀ ಕಾಪಾಡಿ ಸಲಹೋ uragadri vittala srikanta vittala stutih. Show all posts

Thursday, 1 July 2021

ಶ್ರೀಕಾಂತ ವಿಠ್ಠಲ ತವ ಸೇವಕನಾ ದಿವನ ನೀ ಕಾಪಾಡಿ ಸಲಹೋ ankita uragadri vittala srikanta vittala stutih

ಶ್ರೀ ಶ್ರೀಕಾಂತ ವಿಠ್ಠಲ - ಹೆಚ್ ಎಸ್ ಶ್ರೀನಿವಾಸ ಮೂರ್ತಿ
ಉಪದೇಶ ಗುರುಗಳು : ಶ್ರೀ ಉರಗಾದ್ರಿವಾಸ ವಿಠ್ಠಲರು
" ಪೂಜ್ಯ ಶ್ರೀ ಹೆಚ್ ಎಸ್ ಶ್ರೀನಿವಾಸ ಮೂರ್ತಿಗಳಿಗೆ ಶ್ರೀ ಉರಗಾದ್ರಿವಾಸವಿಠ್ಠಲರು ಕೊಟ್ಟ ಅಂಕಿತ ಪದ "

 ಶ್ರೀಕಾಂತ ವಿಠ್ಠಲ  ತವ -

ಸೇವಕನಾ ದಿವನ ।
ನೀ ಕಾಪಾಡಿ ಸಲಹೋ -
ಸನ್ಮತಿಯನಿತ್ತು ।। ಪಲ್ಲವಿ ।।

ವಾಕು ಲಾಲಿಸು ಈ ಬಾಲ -
ನಿನ್ನವನೆಂದು । ನಿ ।
ರಾಕರಿಸದೆ ನಿನ್ನ -
ಭಕುತಿ ಭಾಗ್ಯವನ್ನಿತ್ತು ।। ಅ ಪ ।।

ಆಯುರಾರೋಗ್ಯ -
ಸದ್ವಿದ್ಯ । ವಾ ।
ಕ್ಕಾಯ ಮನದ -
ಧ್ಯಾನ ವೃದ್ಧಿಗೈಸಿ ।
ವಾಯುಮತಾಗಮ -
ತತ್ತ್ವದಾಯವ ತಿಳಿಸು ।
ಜೀಯ ನಿನ್ನ ಸೇವೆಯನಿತ್ತು -
ಕಾಯೋ ।। ಚರಣ ।।

 ಮಾತಾ ಪಿತೃ ಭ್ರಾತೃ -
ಬಂಧು ಭಗಿನಿಯರಲ್ಲಿ । ಶ್ರೀ ।
ಪತಿ ವಿಭೂತಿಗಳ ನೆನೆದು ।
ಜಿತ ಮನದಿ ಪ್ರೀತಿ ವಿಶ್ವಾಸದಲಿ ।
ಸತತ ಶ್ರೀ ಹರಿ ನಿನ್ನ ಬಿಂಬ -
ಕ್ರಿಯಗಳನೆ ಅರುಹೋ ।। ಚರಣ ।।
***