ರಾಗ ನಾಟ. ಅಟ ತಾಳ
ಎಲೆ ಮನವೆ ಹರಿ ಧ್ಯಾನ ಮಾಡು ||ಪ||
ಎಲೆ ಜಿಹ್ವೆ ಕೇಳು ಕೇಶವನಗುಣಗಳ ನುತಿಸು
ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು
ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ
ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ ||
ಎಲೆ ನೇತ್ರಗಳಿರ ಶ್ರೀಕೃಷ್ಣಮೂರ್ತಿಯ ನೋಡಿ
ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ
ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ
ತುಲಸಿ ಪರಿಮಳವನಾಘ್ರಾಣಿಸನುದಿನವು ||
ಎಲೆ ಶಿರವೆ ನೀ ಕೇಳಧೋಕ್ಷಜನ ಸಿರಿಚರಣ
ಜಲರುಹದೊಳಳಿಯಂತೆ ಬಿಡದೆ ಓಲಾಡು
ಎಲೆ ತನುವೆ ನೀನು ಶ್ರೀಪುರಂದರವಿಟ್ಠಲನ
ಸಲೆ ಭಕುತ ಜನರ ಸಂಗತಿಯಲ್ಲಿ ಬಾಳು ||
***
ಎಲೆ ಮನವೆ ಹರಿ ಧ್ಯಾನ ಮಾಡು ||ಪ||
ಎಲೆ ಜಿಹ್ವೆ ಕೇಳು ಕೇಶವನಗುಣಗಳ ನುತಿಸು
ಎಲೆ ಮನವೆ ಮುರವೈರಿಯಂಘ್ರಿಗಳ ಭಜಿಸು
ಎಲೆಲೆ ಕರಗಳಿರ ಶ್ರೀಧರನ ಸೇವೆಯ ಮಾಡಿ
ಎಲೆ ಕರ್ಣಗಳಿರ ಅಚ್ಯುತನ ಕಥೆ ಕೇಳಿ ||
ಎಲೆ ನೇತ್ರಗಳಿರ ಶ್ರೀಕೃಷ್ಣಮೂರ್ತಿಯ ನೋಡಿ
ಎಲೆ ಪಾದಗಳಿರ ಹರಿಯಾತ್ರೆಯನೆ ಮಾಡಿ
ಎಲೆ ನಾಸಿಕವೆ ಮುಕುಂದನ ಚರಣಕರ್ಪಿಸಿದ
ತುಲಸಿ ಪರಿಮಳವನಾಘ್ರಾಣಿಸನುದಿನವು ||
ಎಲೆ ಶಿರವೆ ನೀ ಕೇಳಧೋಕ್ಷಜನ ಸಿರಿಚರಣ
ಜಲರುಹದೊಳಳಿಯಂತೆ ಬಿಡದೆ ಓಲಾಡು
ಎಲೆ ತನುವೆ ನೀನು ಶ್ರೀಪುರಂದರವಿಟ್ಠಲನ
ಸಲೆ ಭಕುತ ಜನರ ಸಂಗತಿಯಲ್ಲಿ ಬಾಳು ||
***
pallavi
ele manave hari dhyAna mADu
caraNam 1
ele jihve kELu kEshavana guNagaLa nudisu ele manave muravairiyanghrigaLa bhajisu
elele karagaLira shrIdharana sEveya mADi ele karNagaLira acyutana kathe kELi
caraNam 2
ele nEtragaLira shrI krSNa mUrtiya nODi ele pAdagaLira haruyAtreyana mADi
ele nAsikave mukundana caraNa karpisida tulasi parimaLavanAghrANisanudinavu
caraNam 3
ele shirave nI kELadhOkSajana siri cAraNa jalaruhadoLaLiyante biDade OLADu
ele tanuve nInu shrI purandara viTTalana sale bhakuta janara sangatiyalli bALu
***