ರಾಗ ಮೋಹನ ಅಟ ತಾಳ
ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ, ಕರುಣಾಕರನಲ್ಲವೆ, ರಂಗ
ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ ||ಪ||
ಭಕ್ತವತ್ಸಲವಲ್ಲವೆ ರಂಗ ಬಲು
ಭಾಗ್ಯವಂತನಲ್ಲವೆ
ಅತ್ಯಪರಾಧಿ ನಾನಾದರೇನಯ್ಯ
ಇತ್ತ ಬಾರೆನ್ನಬಾರದೆ ||
ಬಡವರಾಧಾರನಲ್ಲವೆ ರಂಗ
ಕಡು ಭಾಗ್ಯ ಉಳ್ಳವನಲ್ಲವೆ
ಕಡು ಪಾಪಿಯು ನಾನಾದರೇನಯ್ಯ
ಕಡೆಗೆ ಬಾರೆನ್ನಬಾರದೆ ||
ಶೂರತ್ವವುಳ್ಳವನಲ್ಲವೆ ರಂಗ
ಸುಲಭರ ಅರಸನಲ್ಲವೆ
ಯಾರು ಇಲ್ಲದ ಪರದೇಶಿ ನಾನಾದರೆ
ಸಾರಿ ಬಾರೆನ್ನಬಾರದೆ ||
ಬೇಲೂರ ಚೆನ್ನಿಗ ನೀನಲ್ಲವೆ ರಂಗ
ತುಡುಗಾಯುನುಳ್ಳವನಲ್ಲವೆ
ಹಲವು ಚಿಂತೆ ಎನಗಾದರೆ
ನೆಲೆಗೆ ಬಾರೆನ್ನಬಾರದೆ ||
ದೋಷಿಗ ನಾನಾದರೇನಯ್ಯ ರಂಗ
ದೋಷರಹಿತ ನೀನಲ್ಲವೆ
ವಾಸಿಯಿಂದಲಿ ನೀ ಸಲಹೊ ಎನ್ನ
ವಾಸುಕಿಶಯನ ಪುರಂದರವಿಠಲ ||
***
ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ, ಕರುಣಾಕರನಲ್ಲವೆ, ರಂಗ
ನೀನೇಕೆ ಕಡೆಗಣ್ಣೊಳೆನ್ನ ನೋಳ್ಪೆ ||ಪ||
ಭಕ್ತವತ್ಸಲವಲ್ಲವೆ ರಂಗ ಬಲು
ಭಾಗ್ಯವಂತನಲ್ಲವೆ
ಅತ್ಯಪರಾಧಿ ನಾನಾದರೇನಯ್ಯ
ಇತ್ತ ಬಾರೆನ್ನಬಾರದೆ ||
ಬಡವರಾಧಾರನಲ್ಲವೆ ರಂಗ
ಕಡು ಭಾಗ್ಯ ಉಳ್ಳವನಲ್ಲವೆ
ಕಡು ಪಾಪಿಯು ನಾನಾದರೇನಯ್ಯ
ಕಡೆಗೆ ಬಾರೆನ್ನಬಾರದೆ ||
ಶೂರತ್ವವುಳ್ಳವನಲ್ಲವೆ ರಂಗ
ಸುಲಭರ ಅರಸನಲ್ಲವೆ
ಯಾರು ಇಲ್ಲದ ಪರದೇಶಿ ನಾನಾದರೆ
ಸಾರಿ ಬಾರೆನ್ನಬಾರದೆ ||
ಬೇಲೂರ ಚೆನ್ನಿಗ ನೀನಲ್ಲವೆ ರಂಗ
ತುಡುಗಾಯುನುಳ್ಳವನಲ್ಲವೆ
ಹಲವು ಚಿಂತೆ ಎನಗಾದರೆ
ನೆಲೆಗೆ ಬಾರೆನ್ನಬಾರದೆ ||
ದೋಷಿಗ ನಾನಾದರೇನಯ್ಯ ರಂಗ
ದೋಷರಹಿತ ನೀನಲ್ಲವೆ
ವಾಸಿಯಿಂದಲಿ ನೀ ಸಲಹೊ ಎನ್ನ
ವಾಸುಕಿಶಯನ ಪುರಂದರವಿಠಲ ||
***
pallavi
nInEke kaDegaNNoLenna nOLve karuNAkaranallave ranga nInEke kaDegaNNoLenna nOlve
caraNam 1
bhaktavatsalavallave ranga balu bhAgyavantanallave atyanta aparAdhi nAnAdarEnayya itta bArenna bArade
caraNam 2
baDavarAdhAranallave ranga kaDu bhAgya uLLavanallave kaDu pApiyu nAnAdarEnayya kaDege bArenna bArade
caraNam 3
shuratvavuLLavanallave ranga sulabhara arasanallave yAru illada paradEsi nAnAdare sAri bArenna bArade
caraNam 4
bElUra cenniga nInallave ranga turugAyaluLLavanallave halavu cinte enagAdare nelege bArenna bArade
caraNam 5
dOSiga nAnAdarEnayya ranga dOSa rahita nInallave vAsiyindali nI salaho enna vAsuki shayana purandara viTTala
***