Showing posts with label ಬಂದರೆ ಭಾಗ್ಯ ಲಕ್ಷ್ಮಿಯರುಮುಯ್ಯವ ಛಂದಾಗಿ ಗೆಲಿಸೆಂದುವಂದಿಸಿ ಹರಿಗೆ ramesha. Show all posts
Showing posts with label ಬಂದರೆ ಭಾಗ್ಯ ಲಕ್ಷ್ಮಿಯರುಮುಯ್ಯವ ಛಂದಾಗಿ ಗೆಲಿಸೆಂದುವಂದಿಸಿ ಹರಿಗೆ ramesha. Show all posts

Wednesday, 4 August 2021

ಬಂದರೆ ಭಾಗ್ಯ ಲಕ್ಷ್ಮಿಯರುಮುಯ್ಯವ ಛಂದಾಗಿ ಗೆಲಿಸೆಂದುವಂದಿಸಿ ಹರಿಗೆ ankita ramesha

.. 

ಬಂದರೆ ಭಾಗ್ಯ ಲಕ್ಷ್ಮಿಯರುಮುಯ್ಯವ ಛಂದಾಗಿ ಗೆಲಿಸೆಂದುವಂದಿಸಿ ಹರಿಗೆ ಪ.


ಇಂದು ಮುಖಿಯರೆಲ್ಲ ಛಂದಾದ ವಸ್ತಗಳಿಟ್ಟುಚಂದ್ರಗಾವಿಯನುಟ್ಟು ಚಂದ್ರನಂತೆ ಒಪ್ಪುತ 1

ನೀಲ ಕುಂತಳಿಯರು ನೀಲ ಮಾಣಿಕದ್ವಸ್ತ್ರಮೇಲುದು ಧರಿಸುತ ನೀಲಾದಿಗಳೆಲ್ಲ 2

ವಸ್ತ ಮುತ್ತಿನ ಇಟ್ಟು ಕಸ್ತೂರಿ ಬೊಟ್ಟಿಟ್ಟುಮಸ್ತಕದಲಿ ಮಾಣಿಕ್ಕಿಟ್ಟು ಭದ್ರಾದಿಗಳು 3

ಹಸ್ತಾಭರಣ ಸಮಸ್ತ ವಸ್ತಗಳಿಟ್ಟುಸ್ವಸ್ತ ಚಿತ್ತದಿಂದ ಮಿತ್ರ ವೃಂದಾರಕಾದಿಗಳು 4

ಕಾಲಿಂದ್ಯಾದಿಗಳೆಲ್ಲ ಬಹಳೆ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಲಾಶಯನನ ಬಳಿಗೆ5

ಲಕ್ಷಣಾದಿಗಳೆಲ್ಲ ಲಕ್ಷ ವಸ್ತಗಳಿಟ್ಟುಲಕ್ಷ್ಮಿರಮಣನೆ ಪಂಥ ವೀಕ್ಷಿಸಿಗೆಲಿಸೆಂದು 6

ಜಾಂಬವಂತ್ಯಾದಿಗಳು ತುಂಬಿದೊಸ್ತಗಳಿಟ್ಟುಸಂಭ್ರಮ ಸೂಸುತ ಅಂಬುಜಾಕ್ಷನ ಬಳಿಗೆ7

ಹದಿನಾರು ಸಾವಿರ ಚದುರೆಯರು ವಸ್ತಗಳಿಟ್ಟುಮದನ ಜನಕನ ಮುಯ್ಯ ಮುದದಿಂದ ಗೆಲಿಸೆಂದು8

ವೀರ ರಾಮೇಶ ನಾರಿಯರ ಸೋಲಿಸೋ ಭಾರನಿನ್ನದೆಂದು ನೂರು ಮಂದಿನುಡಿದಾರು 9

****