ಶ್ರೀವ್ಯಾಸರಾಜರು
..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಪಾಲಿಸೋ ಯತಿರಾಜ ಪಾಲಿಸೋ
ಪಾಲಿಸೋ ಮುನಿ ವ್ಯಾಸ ರಾಜ | ಜಗ -
ತ್ತಲ್ಲಿ ನಿನ್ಮಹಿಮೆ ಸುಭ್ರಾಜ | ಅಹ |
ಕಾಲಲ್ಲಿ ಶರಣಾದೆ ಶ್ರೀ ಲೋಲ ಪ್ರಿಯ ನಿನ್ನ
ಆಳೆಂದು ಗಣಿಸಿ ಪಾಲಿಪುದೆನ್ನ ಪ್ರತಿಕ್ಷಣ | ಪಾಲಿಸೋ | ಪ
ದಿನಪ ಸುತೇಜ ಬ್ರಹ್ಮಣ್ಯ | ತೀರ್ಥ
ಮುನಿಸಾರ್ವಭೌಮರ ದಿವ್ಯ | ಚಾರು
ವನರುಹ ಕರದಿಂದ ಉದಯ | ಇನ್ನು
ಏನೆಂಬೆ ನಿನ್ನ ಪ್ರಾಬಲ್ಯ | ಅಹ |
ದೀನ ವತ್ಸಲ ನಿನ್ನ ಶರಣು ಹೊಕ್ಕೆನು ನಾನು
ಎನ್ನ ಭಾಗ್ಯೋದಯ ತವ ಕಾರುಣ್ಯದಿ ಇನ್ನು 1
ಕರುಣಿ ಸುಶಾಂತ ಸುವರ್ಣ | ವರ್ಣ
ತೀರುಥಕರ ಕಂಜೋತ್ಪನ್ನ | ಸು
ಸ್ಥಿರ ವರಭಕ್ತಿ ವಿಜ್ಞಾನ | ಸಂ -
ಪನ್ನ ಶ್ರೀ ಪಾದಾರ್ಯರನ್ನ | ಅಹ |
ಸೇರಿ ಸೇವಿಸಿ ವಾದಿ ಕರಿ ಪಂಚಾನನಾದ
ಸೂರಿ ಸಜ್ಜನನುತ ವ್ಯಾಸ ಮುನೀಂದ್ರ 2
ಮಾಲೋಲ ಕೃಷ್ಣಸುಪ್ರಿಯರು | ನಿತ್ಯ
ಕಾಳೀಶ ನಿಮ್ಮೋಳ್ ಪ್ರಚುರರು | ಮತ್ತು
ವ್ಯಾಳೇಶ ಅಂಶ ಸಂಯುತರು | ಎಂದು
ಹೇಳೋರು ಹೀಗೆ ವಿಬುಧರು | ಅಹ |
ಕೀಳುವಿಷಯದಿ ಎನ್ ಮನ ಸೋಲದೇ ಹೊರ
ಒಳಗಿಪ್ಪ ಹರಿರೂಪ ವ್ಯಾಳೆ ವ್ಯಾಳೆಗೆ ತೋರು 3
ದ್ವಾಸಪ್ತತಿ ಸºಸ್ರ | ನಾಡಿ
ತತ್ರಸ್ಥ ರೂಪ ಸಮೀರ | ಅವನ
ವಿಂಶತಿ ಮೇಲೇಳು ನೂರು | ಪ್ರತಿಮ
ನೀ ಸ್ಥಾಪಿಸದಿಯೋ ಹೇ ಧೀರ | ಅಹ
ಈ ಸಮಸ್ತ ಹನುಮರೂಪ ಒಂದೊಂದರೊಳ್
ಶತರೂಪ ಸ್ಮರಣೀಯ ಶ್ರೀಶ ಸಾಸಿರ ನಾಮ 4
ಸಾತ್ಯವತೀಯ ವೇದಾರ್ಥ | ಅರಿತು
ಮಧ್ಯಗೇಹನು ವಿವರಿಸಿದ | ಆಗ
ಜಯರಾಯ ತತ್ ಟೀಕೆ ಬರೆದ | ಈಗ
ವ್ಯಾಸರಾಯನು ವಿವರಿಸಿದ | ಅಹ
ಮಿಥ್ಯಾ ತತ್ವವ ಪೇಳ್ದ ಮಾಯ್‍ಗಳ ಬಾಯ್ ಮುಚ್ಚಿ
ನಿತ್ಯ ಸುಖವನೀವ ತತ್ವ ಬೋಧಿಸಿದಿ 5
ಮಾರ್ತಾಂಡ ಕತ್ತಲೆ ಕಳೆವ | ತರ್ಕ
ತಾಂಡವ ದುಸ್ತರ್ಕ ತರಿವ | ಬಂಡು
ಮಿಥ್ಯಾವಾದಿಗಳ ದುರ್ಮತವ | ತುಂಡು
ತುಂಡುಮಾಡಿದ ನ್ಯಾಯಾಮೃತವ | ಅಹ
ಕೊಂಡಾಡಳಲವೇ ಚಂದ್ರಿಕಾ ಈವ ಆಹ್ಲಾದವ
ಬ್ರಹ್ಮಾಂqದೊಡೆಯನ ಅಮೃತ ಪ್ರಸಾದವ 6
ಪ್ರಣವ ಮಂತ್ರದಿ ಲಕ್ಷ್ಮೀರಮಣ | ಎಂಟು
ವರ್ಣ ಮಂತ್ರದಿ ಶ್ರೀರಮಣ | ವಿಷ್ಣು
ಷಡ್ವರ್ಣದಲ್ಲಿ ಸತ್ಯಾರಮಣ ಹಾಗೂ
ವರ್ಣ ಸರ್ವದಿ ರಮಾ ರಮಣ | ಅಹ
ಧ್ವನಿ ವರ್ಣ ಪ್ರತಿಪಾದ್ಯ ಸತ್ತಾದಿ ದಾತ
ಅನುತ್ತಮ ಹರಿ ರೂಪ ಗುಣ ಕ್ರಿಯಾ ಹಾಡಿದಿ 7
ಭೂಪನ ಹರಿಯಾಸನವ ನೀ ಏರ್ದಿ | ಏರಿ
ನೃಪವರನಪಮೃತ್ಯು ತರಿದಿ | ಯತಿ
ತಪಸ್ವಿಗಳಿಗೆ ಪಾಠ ಪೇಳ್ದಿ | ಸರ್ವ
ವಿಭುದರಿಂದಲಿ ಪೂಜ್ಯನಾದಿ | ಅಹ |
ಗೋಪಾಲ ಅಸುಪಾಲನ್ನೊಲುಮೆ ನಿನ್ನಲ್ಲೆಷ್ಟೋ
ಶ್ರೀಪನ ದಾಸವೃಂದಬ್ಜ ಕೂಟಕೆ ಸೂರ್ಯ 8
ನರಸಿಂಹ ಗೋಪಾಲ ಕೃಷ್ಣ | ಯಜ್ಞ
ವರಾಹ ಪಟ್ಟಾಭಿರಾಮನ್ನ | ಬಹು
ಪರಾಶರ್ಯಾದಿ ರೂಪನ್ನ | ನಿತ್ಯ
ನಿರುತ ಸಂಪೂಜಿಪ ಘನ್ನ | ಅಹ
ವರಭಕ್ತಾಗ್ರಣಿ ನೀನು ಸರಸಿಜಾಸನ ಪಿತ
'ಪ್ರಸನ್ನ ಶ್ರೀನಿವಾಸ' ನ್ನೊಲಿಸೋ ಎನಗೆ ಜೀಯ 9 ಪ
|| ಸಂಪೂರ್ಣಂ ||
***
ದಿನಪ ಸುತೇಜ ಬ್ರಹ್ಮಣ್ಯ | ತೀರ್ಥಮುನಿಸಾರ್ವಭೌಮರ ದಿವ್ಯ |ಚಾರುವನರುಹಕರದಿಂದ ಉದಯ | ಇನ್ನುಏನೆಂಬೆ ನಿನ್ನ ಪ್ರಾಬಲ್ಯ | ಅಹ |ದೀನ ವತ್ಸಲ ನಿನ್ನ ಶರಣು ಹೊಕ್ಕೆನು ನಾನುಎನ್ನ ಭಾಗ್ಯೋದಯ ತವ ಕಾರುಣ್ಯದಿ ಇನ್ನು 1
ಕರುಣಿ ಸುಶಾಂತ ಸುವರ್ಣ | ವರ್ಣತೀರುಥಕರ ಕಂಜೋತ್ಪನ್ನ | ಸುಸ್ಥಿರ ವರಭಕ್ತಿವಿಜ್ಞಾನ| ಸಂ-ಪನ್ನ ಶ್ರೀ ಪಾದಾರ್ಯರನ್ನ | ಅಹ |ಸೇರಿ ಸೇವಿಸಿ ವಾದಿಕರಿಪಂಚಾನನಾದಸೂರಿಸಜ್ಜನನುತ ವ್ಯಾಸ ಮುನೀಂದ್ರ2
ಮಾಲೋಲ ಕೃಷ್ಣಸುಪ್ರಿಯರು |ನಿತ್ಯಕಾಳೀಶ ನಿಮ್ಮೋಳ್ ಪ್ರಚುರರು | ಮತ್ತುವ್ಯಾಳೇಶ ಅಂಶ ಸಂಯುತರು | ಎಂದುಹೇಳೋರು ಹೀಗೆ ವಿಬುಧರು | ಅಹ |ಕೀಳುವಿಷಯದಿ ಎನ್ ಮನ ಸೋಲದೇ ಹೊರಒಳಗಿಪ್ಪ ಹರಿರೂಪ ವ್ಯಾಳೆ ವ್ಯಾಳೆಗೆ ತೋರು 3
ದ್ವಾಸಪ್ತತಿ ಸºಸ್ರ | ನಾಡಿತತ್ರಸ್ಥರೂಪಸಮೀರ| ಅವನವಿಂಶತಿ ಮೇಲೇಳು ನೂರು | ಪ್ರತಿಮನೀ ಸ್ಥಾಪಿಸದಿಯೋ ಹೇ ಧೀರ | ಅಹಈ ಸಮಸ್ತ ಹನುಮರೂಪ ಒಂದೊಂದರೊಳ್ಶತರೂಪ ಸ್ಮರಣೀಯ ಶ್ರೀಶ ಸಾಸಿರ ನಾಮ 4
ಸಾತ್ಯವತೀಯ ವೇದಾರ್ಥ | ಅರಿತುಮಧ್ಯಗೇಹನು ವಿವರಿಸಿದ | ಆಗಜಯರಾಯ ತತ್ ಟೀಕೆ ಬರೆದ | ಈಗವ್ಯಾಸರಾಯನು ವಿವರಿಸಿದ | ಅಹಮಿಥ್ಯಾ ತತ್ವವ ಪೇಳ್ದ ಮಾಯ್‍ಗಳ ಬಾಯ್ ಮುಚ್ಚಿನಿತ್ಯಸುಖವನೀವ ತತ್ವ ಬೋಧಿಸಿದಿ5
ಮಾರ್ತಾಂಡಕತ್ತಲೆ ಕಳೆವ | ತರ್ಕತಾಂಡವ ದುಸ್ತರ್ಕ ತರಿವ |ಬಂಡುಮಿಥ್ಯಾವಾದಿಗಳ ದುರ್ಮತವ | ತುಂಡುತುಂಡುಮಾಡಿದ ನ್ಯಾಯಾಮೃತವ | ಅಹಕೊಂಡಾಡಳಲವೇ ಚಂದ್ರಿಕಾಈವಆಹ್ಲಾದವಬ್ರಹ್ಮಾಂqದೊಡೆಯನ ಅಮೃತ ಪ್ರಸಾದವ 6
ಪ್ರಣವಮಂತ್ರದಿ ಲಕ್ಷ್ಮೀರಮಣ | ಎಂಟುವರ್ಣ ಮಂತ್ರದಿ ಶ್ರೀರಮಣ | ವಿಷ್ಣುಷಡ್ವರ್ಣದಲ್ಲಿ ಸತ್ಯಾರಮಣ ಹಾಗೂವರ್ಣ ಸರ್ವದಿ ರಮಾ ರಮಣ | ಅಹಧ್ವನಿ ವರ್ಣ ಪ್ರತಿಪಾದ್ಯ ಸತ್ತಾದಿದಾತಅನುತ್ತಮಹರಿರೂಪಗುಣಕ್ರಿಯಾ ಹಾಡಿದಿ7
ಭೂಪನ ಹರಿಯಾಸನವ ನೀ ಏರ್ದಿ | ಏರಿನೃಪವರನಪಮೃತ್ಯು ತರಿದಿ | ಯತಿತಪಸ್ವಿಗಳಿಗೆ ಪಾಠ ಪೇಳ್ದಿ | ಸರ್ವವಿಭುದರಿಂದಲಿ ಪೂಜ್ಯನಾದಿ | ಅಹ |ಗೋಪಾಲ ಅಸುಪಾಲನ್ನೊಲುಮೆ ನಿನ್ನಲ್ಲೆಷ್ಟೋಶ್ರೀಪನ ದಾಸವೃಂದಬ್ಜ ಕೂಟಕೆ ಸೂರ್ಯ 8
ನರಸಿಂಹ ಗೋಪಾಲ ಕೃಷ್ಣ | ಯಜÕವರಾಹಪಟ್ಟಾಭಿರಾಮನ್ನ | ಬಹುಪರಾಶರ್ಯಾದಿ ರೂಪನ್ನ |ನಿತ್ಯನಿರುತ ಸಂಪೂಜಿಪ ಘನ್ನ | ಅಹವರಭಕ್ತಾಗ್ರಣಿ ನೀನು ಸರಸಿಜಾಸನ ಪಿತ'ಪ್ರಸನ್ನ ಶ್ರೀನಿವಾಸ' ನ್ನೊಲಿಸೋ ಎನಗೆಜೀಯ9 ಪ|| ಸಂಪೂರ್ಣಂ ||
*******