Showing posts with label ಸಾಕು ಸಾಕು ಮನುಜ ಸೇವೆಯು ರಂಗಯ್ಯ ಇನ್ನು neleyadikeshava SAAKU SAAKU MANUJA SEVEYU RANGYYA INNU. Show all posts
Showing posts with label ಸಾಕು ಸಾಕು ಮನುಜ ಸೇವೆಯು ರಂಗಯ್ಯ ಇನ್ನು neleyadikeshava SAAKU SAAKU MANUJA SEVEYU RANGYYA INNU. Show all posts

Wednesday, 3 November 2021

ಸಾಕು ಸಾಕು ಮನುಜ ಸೇವೆಯು ರಂಗಯ್ಯ ಇನ್ನು ankita neleyadikeshava SAAKU SAAKU MANUJA SEVEYU RANGYYA INNU



ಸಾಕು ಸಾಕು ಮನುಜಸೇವೆಯು ರಂಗಯ್ಯ ಇನ್ನು || ಪ ||

ಸಾಕು ಸಾಕು ಮನುಜಸೇವೆ ಮಾಡಿ ದಣಿದು ನೊಂದೆ ನಾನು | 
ಬೇಕು ನಿನ್ನ ಪಾದ ಭಜನೆ ಲೋಕದೊಡೆಯ ರಂಗ ರಾಯ || ಅ ||

ಹೊತ್ತರೆದ್ದು ಪೋಗಿ ಪರರ ಚಿತ್ತವೃತ್ತಿಯನ್ನೆ ಅರಿತು | 
ನಿತ್ಯದಲ್ಲಿ ಹಲವು ಕೆಲಸ ಭೃತ್ಯನಂತೆ ಮಾಡಿ ರಿಕ್ತ | 
ಹಸ್ತದಿಂದ ಮನೆಗೆ ಸೇರುವೆ | ಆಸೆಗಾಗಿ | 
ಮತ್ತೆ ಕಂಡ ಕಡೆಗೆ ತೊಲಗುವೆ | ಬಂದು ಅಪರ | 
ರಾತ್ರೆಯಲಿ ತಿಂದು ಒರಗುವೆ | ರಂಗಯ್ಯ ರಂಗ || ೧ ||

ಸ್ನಾನ ಮೌನ ನಿತ್ಯ ಸಂಧ್ಯಾ ನೇಮಗಳನೆ ತೊರೆದು | 
ಹೀನನಾಗಿ ಕೆಟ್ಟ ಜನರ ಮನೆಗಳನ್ನು ತಿರುಗಿ ತಿರುಗಿ | 
ಶ್ವಾನದಂತೆ ದಿನವ ಕಳೆವನೊ | ದುರಾಸೆಯನ್ನು | 
ಮನದಲಿಟ್ಟುಕೊಂಡು ಕುದಿವೆನೊ | ಕೊನೆಗೂ ಎಳ್ಳು ಕಾ | 
ಳಿನಷ್ಟು ಸುಖವ ಕಾಣೆನೋ | ರಂಗಯ್ಯ ರಂಗ || ೨ ||

ಒಡಲಿನಾಸೆಗಾಗಿ ನೊಣವು ತುಡಕಿ ಬಿದ್ದು ಜೇನಿನೊಳಗೆ | 
ಮಿಡುಕುವಂತೆ ಬಾಯ ಬಿಡುವೆ ಬಿಸುರಹಾಕ್ಷನೆ | 
ಬಿಡಿಸೊ ಎನ್ನ ಬಂಧಪಾಶವಾ | ಕಾಗಿನೆಯಾದಿಕೇಶವಾ | 
ಕೊಡಿಸೊ ನಿನ್ನ ಭಕ್ತರ ಸಂಗವ | 
ಒಡೆಯ ವೆಂಕಟಾದ್ರಿ ಮಾಧವ | ರಂಗಯ್ಯ ರಂಗ || ೩ ||
***

Saku saku manuja seveyu rangayya innusaku
Saku manujaseve madi danidu nonde nanu
Beku ninna padabhajane lokadodeya rangaraya

Hottareddu hogi parara cittavrittiyanne aritu
Nityadalli halavu kelasa Bhrityanante madi
Rikta hastadinda manege seruve
Asegagi matte kanda kadege tolaguve
Bandu apara ratriyalli tindu oraguve rangayya ranga||1||

Snana mouna nitya sandhyana nemagalane toredu
Hinanagi ketta janmagalali tirugi tirugi
Shvananante dinava kaledeno
Duraseyannu manadalittukondu kudiveno
Konege ellukalinashtu sukhava kaneno rangayya ranga||2||

Odalinasegagi nonavu tunuki biddu jeninolage
Midukuvante bayabiduve bisaruhakshane
Bidiso enna bandhapashava kagineleyadikeshava
Kodiso ninna Bhaktara sangava
Odeya venkatadri madhava rangayya ranga||3||
***