ಮುರಹರ ನಗಧರ ನೀನೆ ಗತಿ || ಪಲ್ಲವಿ ||
ಧರಣೀ ಲಕ್ಷ್ಮೀಕಾಂತ ನೀನೆ ಗತಿ || ಅನುಪಲ್ಲವಿ ||
ಶಕಟಮರ್ದನ ಶರಣಾಗತವತ್ಸಲ
ಮಕರ ಕುಂಡಲಧರ ನೀನೆ ಗತಿ
ಅಕಳಂಕಚರಿತ ಆದಿನಾರಾಯಣ
ರುಕುಮಿಣಿಪತಿ ಕೃಷ್ಣ ನೀನೆ ಗತಿ || ೧ ||
ಮನೆಮನೆಗಳ ಪೊಕ್ಕು ಕೆನೆ ಹಾಲು
ಬೆಣ್ಣೆಯಪ್ರಮಿತ ಮೆದ್ದ ಹರಿ ನೀನೆ ಗತಿ || ೨ ||
ಪನ್ನಗಶಯನ ಸುಪರ್ಣಗಮನ
ಪೂರ್ಣಚರಿತ ಹರಿ ನೀನೆ ಗತಿ
ಹೊನ್ನ ಹೊಳೆಯಲಿ ಪುರಂದರವಿಠಲ
ಚೆನ್ನ ಲಕ್ಷ್ಮೀಕಾಂತ ನೀನೆ ಗತಿ || ೩ ||
****
ರಾಗ ಆರಭಿ/ತಾಳ ಆದಿ (raga, taala may differ in audio)
pallavi
murahara nagadhara nInE gati
anupallavi
dharaNI lakSmIkAnta nInE gati
caraNam 1
shakaTa mardana sharaNAgata vatsala makara kuNDaladhara nInE gati
akaLanka carita Adi nArAyaNa rukumiNi pati krSNa nInE gati
caraNam 2
mane manegaLa pokku kenehAlu beNNeya pramita metta hari nInE gati
anudina bhakutara biDade kAyuva ghana mahima krSNa nInE gati
caraNam 3
pannaga shayana suparNa gamana pUrNa carita hari nInE gati
honna hoLeyali purandara viTTala cenna lakSmIkAnta nInE gati
***
ಮುರಹರ ನಗಧರ ನೀನೆ ಗತಿ ಧರಣಿ ಲಕ್ಷ್ಮೀಕಾಂತ ನೀನೆಗತಿ ಪ
ಶಕಟ ಮರ್ದನ ಶರಣಾಗತ ವತ್ಸಲಮಕರಕುಂಡಲಧರ ನೀನೆಗತಿ||ಅಕಳಂಕ ಚರಿತನೆ ಆದಿನಾರಾಯಣರುಕುಮಿಣಿಪತಿ ಕೃಷ್ಣ ನೀನೆಗತಿ1
ಮನೆಮನೆಗಳ ಪೊಕ್ಕು ಕೆನೆ ಹಾಲು ಬೆಣ್ಣೆಯದಿನ ದಿನ ಮೆದ್ದಹರಿನೀನೆಗತಿ||ಅನುದಿನಭಕುತರ ಬಿಡದೆ ಕಾಯುವಘನಮಹಿಮನೆ ಕೃಷ್ಣ ನೀನೆಗತಿ2
ಪನ್ನಗಶಯನ ಸುಪರ್ಣಗಮನನೇಪೂರ್ಣ ಚರಿತಹರಿನೀನೆಗತಿ||ಹೊನ್ನ ಹೊಳೆಯಲಿಹಪುರಂದರವಿಠಲಚೆನ್ನ ಲಕ್ಷ್ಮೀಕಾಂತ ನೀನೆಗತಿ3
*********