ಹಿರಿಯ ವಡೆಯನಲ್ಲವೆ ನಮ್ಮ ರಂಗಾ l
ಹಿರಿಯ ವಡೆಯನಲ್ಲವೆ ನಮ್ಮ ರಂಗಾ l
ಸಿರಿಬೊಮ್ಮ ಶಿವರಿಂದ ಪೂಜೆಯಗೊಂಬುವಾ ll ಪ ll
ಪ್ರಳಯದೊಳು ಪ್ರಣವ ಪ್ರತಿಪಾದ್ಯ l
ಮಲಗಿರೆ ಮಹಾಕಾಂತಿ ಪೊಗಳೆ ll
ಹಲವು ಜೀವರ ಕರ್ಮ ಫಲ ನೇಮಿಸಿಕೊಂಡು l
ಜಲಜಲೋಚನ ಶ್ರೀ ಬಿನ್ನಹ ಕೈಕೊಂಬೆ ll 1 ll
ತಮನೆಂಬ ದೈತ್ಯನು ವೇದ ಕದ್ದೊಯ್ಯಲು l
ಸುಮನಸರು ಸಾರಿ ತುತಿಸಿ ಕೇಳೆ l
ಕಮಲಾಪತಿ ದೈತ್ಯನ್ನ ಕೊಂದು ವೇದವ l
ಕಮಲೋದ್ಭವಗಿತ್ತು ಕಾಯ್ದಿದ್ದ ಕಾರಣ ll 2 ll
ಕ್ಷುದ್ರ ದೈತ್ಯನಿಗೆ ರುದ್ರವರವನಿತ್ತು l
ಪದ್ರವದಿ ಬಳಲುತ ಓಡ್ಯಾಡೆ l
ಭದ್ರ ಮುರಾರೇ ಮುದ್ದುವಿಟ್ಠಲಾ ದೈತ್ಯನ್ನ l
ಛಿದ್ರಿಸಿ ರುದ್ರನ್ನ ಸಲಹಿದ ಕಾರಣ ll 3 ll
***