ಪುರಂದರದಾಸರು
ಬಲ್ಲವನಾದರೆ ಈ ತಳ್ಳಿಬೇಡ |ಅಲ್ಲದಪಥಇದರಾಸೆಯ ಬಿಡು ನೀನು ಪ.
ಸರ್ಪನ ಪಣೆಯೊಳು ಜೇನು ತುಪ್ಪವ ಕಂಡು |ಅಪ್ಪನೆ ತಾರೆಂದು ಅಳುತಿರಲು ||ತುಪ್ಪದ ಸವಿಯನು ಜನರುಂಡುತೀರಲು |ಮುಪ್ಪಾಗಿ ಇರುವುದ ಕಂಡು ಮೂದಲಿಸುವ 1
ನಂಬಿದ ಮನುಜರ ಹಂಬಲ ಮರೆವುದು |ಡೊಂಬಿಯವರು ಕಂಡು ತಡೆಯಲಾಗಿ ||ಕುಂಭದ ರೊಕ್ಕದ ಲಂಚವನಿತ್ತಲ್ಲಿ |ಅಂಬರವನು ಕಂಡು ನಗುತಿಪ್ಪ ಮನುಜನ 2
ಅಂಬರವಡಗಿಯೆಕುಂಭಿನಿ ಜಾರಿಯೆ |ನಂಬಿದ ಮನುಜರು ನಡೆವಡೆಯೆ ||ಕುಂಭದ ನೀರನು ಚೆಲ್ಲುತ ಮಗುಳಲ್ಲಿಕಂಬದ ಹಾಗೆಯೆ ನಿಂತಿಹ ನರನು 3
ಇಟ್ಟಿಹ ಬಾಗಿಲ ಕಾಣದೆ ತಾ ಬಂದು |ಹೊಟ್ಟೆಯ ಬಗಿದಲ್ಲಿ ಹೊರವಂಟ ವೇಳೆ ||ಕಟ್ಟಿದ್ದು ಕರಗಿಯೆ ಸೆಟ್ಟೆಲೆ ಒಣಗಿಯೆ |ದುಷ್ಟನೊಬ್ಬನು ಬಂದು ನಿಂತಿಹನು 4
ಕಡಹದ ಪಲ್ಲಕ್ಕಿ ಬೆಡಗನು ಕಾಣುತ |ಅಡವಿಯಮೃಗ ಬಂದು ಕುಳಿತಿರ್ದುದ ||ಒಡನೆ ಕಟ್ಟಿದ ವಾಹಕರು ಹದಿನಾರು ಮಂದಿ |ಕಡಮೆಯ ಸಂಬಳ ತಡವಿಡುವವರನು 5
ಅಕ್ಕಿಯ ರಾಶಿಯು ತೀರಲು ಕೊಳಗವು |ಬೆಕ್ಕಸ ಬೆರಗಾಗಿ ಕುಳಿತಿಪ್ಪದು ||ಬಿಕ್ಕಿದ ಅಕ್ಕಿದ ಹಕ್ಕಿಯು ಹಕ್ಕಿಯೆ |ಗಕ್ಕನೆ ಹಾರವ ಪಕ್ಷಿಯ ನೋಡುತ 6
ಇರುತಿರೆ ಗಣಿತದಿರವಿಶಶಿ ಒಂದಾಗಿ |ಧರೆಯೊಳು ಸಾವಿರ ಎಲೆ ಬೀಳ್ವುದು ||ಎರವಿನಾಭರಣವ ಅವರವರೊಯ್ಯಲು |ಪುರಂದರವಿಠಲನ ಮೊರೆಬೀಳು ಕಂಡೆಯ 7
********