Showing posts with label ವೃಥಾಮಾಡಬೇಡ ಈ ಜನ್ಮವು tulasi. Show all posts
Showing posts with label ವೃಥಾಮಾಡಬೇಡ ಈ ಜನ್ಮವು tulasi. Show all posts

Friday, 27 December 2019

ವೃಥಾಮಾಡಬೇಡ ಈ ಜನ್ಮವು ankita tulasi

by ತುಳಸೀರಾಮದಾಸರು
ವೃಥಾಮಾಡಬೇಡ ಈ ಜನ್ಮವು ಸದಾಬರದು ಮೂಢಾ ಪ

ಅಧೋಕ್ಷಜನ ಮೃದು ಪಾದಾರವಿಂದಗಳಯಥಾರ್ಥದಿಂ ಭಜಿಸಿ ಕೃತಾರ್ಥನಾಗದೆ 1

ಸುಧಾರದನಗೃಹಪದಾರ್ಥದಾಶದಿಂಮದಾಂಧದಿಂಗುರುಬುಧಾಳಿ ಸೇರದೆ2

ಪಿತಾ ಮಾತಾ ಹಿತ ಸುತಾದಿ ಬಂಧುಗಳ್ಹಿತಾರ್ಥರೆಂದು ಪರಗತೀ ನೀ ಕಾಣದೆ 3

ಹರೆದುರಿತಪರಿಹರೆ ತುಲಸಿರಾಮಧೊರೆಯೆಂದು ನೀ ಮೊರೆಹೊಕ್ಕಡೆ 4
******