ಇರಬೇಕು ಹರಿದಾಸರ ಸಂಗ
ಪರಮ ಜ್ಞಾನಿಗಳ ಸಂಪಾದಿಸಬೇಕು ||ಪ||
ಅತಿಜ್ಞಾನಿಯಾಗಬೇಕು , ಹರಿಕಥೆ ಕೇಳಬೇಕು
ಯತಿಗಳ ಪಾದಕ್ಕೆ ಎರಗಬೇಕು
ಸತಿಸುತರಿರಬೇಕು , ಅತಿಮೋಹ ಬಿಡಬೇಕು
ಮತಿಯೊಂದು ಬಿಡದೆ ಹರಿ ಪೂಜಿಪರ ಸಂಗ ||
ನಡೆಯಾತ್ರೆ ಎನಬೇಕು , ನುಡಿನೇಮವಿರಬೇಕು ,
ಬಿಡದೆ ಹರಿಪೂಜೆಯ ಮಾಡಬೇಕು
ಅಡಿಗಡಿಗೆ ನೆನೆಬೇಕು , ಹರಿಗಡ್ಡ ಬೀಳಬೇಕು
ಬಿಡದೆ ಹರಿಭಜನೆ ಮಾಡುವರ ಸಂಗ ||
ಸುರಹರವಿರಿಂಚಿಗಳ ಪರಿಯ ತಿಳಿಯಲುಬೇಕು
ತಾರತಮ್ಯ ಪಂಚಭೇದ ತತ್ವನಿರತ
ಅರಿಯದಿದ್ದರೆ ಗುರುಹಿರಿಯರನೆ ಕೇಳಬೇಕು
ಪರಮಾನಂದದಿ ಲೋಲಾಡುವರ ಸಂಗ ||
ಷಟ್ಕರ್ಮ ಮಾಡಬೇಕು , ವೈಷ್ಣವನೆನಿಸಬೇಕು
ವಿಷ್ಣುದಾಸರ ದಾಸನಾಗಬೇಕು
ಉತ್ಕೃಷ್ಟ ವೈರಾಗ್ಯ ಬೇಕು , ದುಷ್ಟಸಂಗ ಬಿಡಬೇಕು
ಎಷ್ಟು ಕಷ್ಟ ಬಂದರು ವಿಷ್ಣುಭಜಿಪರ ಸಂಗ ||
ಏಕಾಂತ ಕೊಡಬೇಕು , ಲೋಕವಾರ್ತೆ ಬಿಡಬೇಕು
ಲೋಕೈಕನಾಥನ ಭಜಿಸಬೇಕು
ಸಾಕು ಸಂಸಾರವೆಂದು ಕಕುಲಾತಿ ಬಿಡಬೇಕು
ಶ್ರೀಕಾಂತ ಪುರಂದರವಿಠಲದಾಸರ ಸಂಗ ||
****
ರಾಗ ಕಾಂಭೋಜ ಅಟತಾಳ (raga tala may differ in audio)
pallavi
irabEku haridAsara sanga parama jnAnigaLa sampAdisa bEku
caraNam 1
ati jnAniyAga bEku harikathe kELa bEku yatigaLa pAdakke eraga bEku
sati sutarira bEku ati mOha biDa bEku matiyendu biDade hari pUjipara sanga
caraNam 2
naDe yAtreyena bEku nuDi nEmavira bEku biDade hari pUjeya mADa bEku
aDigaDige nene bEku harigaDDa bILa bEku biDade hari bhajaneya mADuvara sanga
caraNam 3
sura hara virincigaLa pariya tiLiyalu bEku tAratamya panca bhEda tatva nirata
ariyadiddare guru hariyarane kELa bEku paramAnandadi lOlADuvara sanga
caraNam 4
SaDkarma mADa bEku vaiSNavanenisa bEku viSNu dAsara dAsanAga bEku
utkrSTa vairAgya bEku duSTa sanga biDa bEku eSTu kaSTa bandaru viSNu bhajipara sanga
caraNam 5
EkAnta koDa bEku lOkavArte biDa bEku lOkaika nAthana bhajisa bEku
sAku samsAravendu kakulAti biDa bEku shrIkAnta purandara viTTala dAsara sanga
***
ಇರಬೇಕು ಹರಿದಾಸರ ಸಂಗವರಜ್ಞಾನಿಗಳ ದಯ ಸಂಪಾದಿಸಬೇಕು ಪ.
ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕುಯತಿಗಳ ಪಾದಕ್ಕೆ ಎರಗಬೇಕುಸತಿ ಸುತರಿದ್ದು ಮಮತೆಯನು ಬಿಡಬೇಕುಗತಿಯೆಂದು ಬಿಡದೆ ಹರಿಯ ಪೋಪರಸಂಗ 1
ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕುಬಿಡದೆ ಹರಿಯ ಪೂಜೆಯ ಮಾಡಬೇಕುಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕುಬಿಡದೆ ಹರಿಭಜನೆಯ ಮಾಡುವರ ಸಂಗ 2
ಹರಿ - ಹರ -ವಿರಂಚಿಯರ ಪರಿಯ ತಿಳಿಯಬೇಕುತರತಮದಿ ರುದ್ರ - ಇಂದ್ರಾದಿಗಳಅರಿಯದಿದ್ದರೆ ಗುರುಹಿರಿಯರ ಕೇಳಬೇಕುಪರಮಾನಂದದಲಿ ಓಲಾಡುವರ ಸಂಗ 3
ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉ -ತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕುವಿಷ್ಣುವಿನ ದಾಸರ ದಾಸನಾಗಲುಬೇಕುಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ 4
ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕುಲೋಕೈಕನಾಥನ ಭಜಿಸಬೇಕುಸಾಕು ಸಂಸಾರವೆಂದುಕಕ್ಕುಲತೆ ಬೀಡಬೇಕುಶ್ರೀಕಾಂತಪುರಂದರವಿಠಲರಾಯನ ಸಂಗ5
*******