Showing posts with label ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ vaikunta vittala. Show all posts
Showing posts with label ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ vaikunta vittala. Show all posts

Sunday 1 August 2021

ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ ankita vaikunta vittala

 ..


kruti by ಬೇಲೂರು ವೈಕುಂಠ ದಾಸರು belur vaikunta dasaru

ತಿರುವಂಗೂರು


ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ

ಭೋರೆಂಬ ವಾದ್ಯರವದಿ ಪ


ಶ್ರೀರಮಣ ಚಿತ್ತಾವಧಾನ ಪರಾಕು ಕೈ

ವಾರಿಸುವ ಪಾಠಕರ ಮೇಳದಿಂ ರಾಮನೂ ಅ.ಪ

ಮುತ್ತು ನವರತ್ನ ಕೆತ್ತಿಸಿ ಬಿಗಿದಚಲ್ಲಣದ

ಇತ್ತರದ ಸಮಕಟ್ಟಿನಾ ಝಲ್ಲಿಯಾ

ಸುತ್ತ ಮುಖದಲಿ ಮಿನುಗುವರಳೆಲೆಯ ಢಾಳದಿಂ

ದೊತ್ತಿಸಿದ ಕಡಿವಾಣದಾ ಮುಖಾರಂಬದಾ

ಕತ್ತಿ ಸಿಂಗಾಡಿ ಕೆಡೆಯ ಬತ್ತಳಿಕೆ ಬಿಗಿ

ದೊತ್ತಿ ಕುಣಿಕುಣಿದು ಬರುವಾ ತೇಜಿಯಾ

ಅರ್ತಿಯಿಂ ರಾಮರಾವುತನೇರಿ

ದೈತ್ಯವಿಪಿನಕ್ಕೆ ಪೊರಮಟ್ಟೈದಿದಾ ರಾಮನೂ 1


ಸುರರು ಫೌಜಾಗಿ ತೋರಲು ಸೋಮಸೂರಿಯರು

ವರಛತ್ರವನುವಾಗಿ ಪಿಡಿದು ನಿಲಲೂ

ಸರಸಿಜೋದ್ಭವನು ಸಾರಥಿಯಾಗಿ ನಡೆಸುತಿರೆ

ವರರಥವ ಸಿಂಗರಸಿ ಹರಿ ಸ್ಮರಿಸಿ ತನ್ನಾ

ವರವಾಹನವನೇರಿ ಚರಿಸುತುತ್ಸಾಹದಿಂ

ತ್ವರದಿಂದ ನಡೆಯುತಿರಲೂ

ಖರದೂಷಣ ತ್ರಿಶಿರ ಮಾರೀಚ ಮೃಗಕುಲವ

ತರಿದು ಬೇಟೆಯನಾಡಿದಾ ರಾಮನೂ 2


ದುರುಳ ದಶಶಿರ ಕುಂಭಕರ್ಣ ಮೊದಲಾಗಿದ್ದ ಖ

ಳರ ಖಂಡಿಸಿ ಕದನದಲ್ಲಿ ಗೆಲಿದೂ

ಮರೆಹೊಕ್ಕ ವೀರವೈಷ್ಣವ ವಿಭೀಷಣನೆಂಬ

ಶರಣನನು ಪರಿಪಾಲಿಸಿ ಜಗದೊಳೂ

ಪರಿವುತಿಹ ಕಾವೇರಿ ಉತ್ತರದ ಭಾಗದಲಿ

ಮೆರೆವ ತಿರುವಂಗೂರಿನಲೀ ಸುಖದಲೀ

ಸ್ಮರರೂಪ ವೈಕುಂಠರಾಮ ಬೇಟೆಯನಾಡಿ

ಪರಮ ಹರುಷದಿ ಬಂದು ನಿಂದ ಸಂಭ್ರಮದಿ 3

***