Showing posts with label ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ramesha. Show all posts
Showing posts with label ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ramesha. Show all posts

Wednesday, 4 August 2021

ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ankita ramesha

 ..

ಎಲ್ಲ ವಾರ್ತೆಯ ಹೇಳ ಮನ್ನಿಸಿನಮ್ಮ ಫುಲ್ಲನಾಭನ ಗುಣ ವರ್ಣಿಸಿ ದೂತೆ ಪ.

ಗೆಜ್ಜೆ ಘಿಲ ಘಿಲಕೆಂದು ಬಂದಳು ದೂತೆಗುಜ್ಜಿ ದ್ರೌಪತಿಗೆರಗಿ ನಿಂತಳುನಮ್ಮ ಅರ್ಜುನಗೆ ಅತಿ ದಯವೆಂದಳು ನಿರ್ಜರೇಶನ ಕಂಡೆನೆಂದಳು1

ಕಳಕಳಿಯ ಸೂಸುತ ತನ್ನ ಥಳ ಥಳ ಮುಖಕಮಲ ಹೊಳೆವುತದೂತೆನಳಿನ ತೋಳಿನ ವಸ್ತ ಝಳ ಝಳಿಸುತಬಂದು ಕುಳಿತಳೆ ಮಾತಿನ ಚಪಲೆ 2

ನಡೆದು ಅಚ್ಯುತನಲ್ಲೆ ಹೋದೆಯಾ ಕೃಷ್ಣನ ಅಡಿಗೆರಗಿ ಮುಖ ನೋಡಿದೆಯನಯ ನುಡಿಯ ಮಾತುಗಳನೆ ಆಡಿದೆಯ ನಿಮ್ಮ ಒಡೆಯರ ಭಕುತಿ ಕೊಂಡಾಡಿದೆಯ ದೂತೆ 3

ಶಾಂತ ಮೂರುತಿ ನಿನ್ನ ನೋಡಿದನೇನಐವರಿಗೆ ಅಂತಃಕರುಣ ಭಾಳ ಮಾಡಿದನೇನಎನ್ನ ಅಂತರಂಗದ ಮಾತು ನುಡಿದೆಯೇನಲಕ್ಷ್ಮಿಕಾಂತನ ಗುಣ ಕೊಂಡಾಡಿದೆಯ ದೂತೆ4

ಎನ್ನ ದ್ರೌಪತಿ ಕಳುಹ್ಯಾಳೆಂದೇನೆ ಸ್ವಾಮಿನಿನ್ನ ಮಾತುಗಳ ಮನಕೆ ತಂದಾನೇನ ಕೃಷ್ಣ ಎನ್ನ ಪ್ರಾಣವು ಐವರದೆಂದನೇನಇನ್ನುದಯದ ಸುಗ್ಗಿ ಸುದ್ದಿ ತಂದೇನ ದೂತೆ 5

ಭಾವೆ ರುಕ್ಮಿಣಿಪಾದ ನೋಡಿದೆಯ ನೀನುಭಾವ ಭಕುತಿಯಲಿ ವಂದನೆ ಮಾಡಿದೆಯ ನಿಮ್ಮ ಮೋಹ ದ್ರೌಪತಿಗಿರಲಂದೆಯ ಮುಯ್ಯಾ ತಾಹೊ ವಿಸ್ತಾರವ ಕೊಂಡಾಡಿದೆಯ 6

ನೀಲವರ್ಣನ ಪಾದ ಕಂಡೆಯಘೃತ ಹಾಲು ಸಕ್ಕರೆ ಸವಿದುಂಡೆಯ ವಸ್ತ್ರ ವೀಳ್ಯ ರಾಮೇಶನಿಂದ ಕೊಂಡೆಯನಿನ್ನ ಕಣ್ಣು ಹಬ್ಬವ ಮಾಡಿಕೊಂಡೇನ ದೂತೆ 7

****