Showing posts with label ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ shanti. Show all posts
Showing posts with label ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ shanti. Show all posts

Sunday, 1 August 2021

ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ ankita shanti

 ..

kruti by shantibai dasaru ಶಾಂತಿಬಾಯಿ ದಾಸರು


ನಿನ್ನ ಹೊರತು ಅನ್ಯರನರಿಯೆನೂ ಶ್ರೀ ವಾಸುದೇವಾ

ನಿನ್ನ ಹೊರತು ಅನ್ಯನರಿಯೆನೂ

ನಿನ್ನ ಹೊರತು ಅನ್ಯರರಿಯೆ ಪನ್ನಗೇಂದ್ರವಾಸ ಹರಿಯೆ

ಸನ್ನುತಾತ್ಮ ನಿಜವನಿತ್ತು ಪ್ರಸನ್ನ ಗುರುವರೇಂದ್ರ ದೇವಾ ಪ


ಉರಗನ್ಹೆಡೆಯ ನೆರಳ ಸ್ಥಿರವೆಂದು ಕಪ್ಪೆಯು ನಿಂತ

ತೆರದಿ ವಿಷಯದೊಳಗೆ ಬೆರದು ಬೆಂದೆನು ನಾ

ದುರಿತ ದುಷ್ಟಗಣದಿ ಹರಿದೂ ಮೃತ್ಯುವನೆ ಮರೆದು

ಅರಿವು ಮಾಯವಾಗಿರುವ ಎನ್ನಾ ಸ್ತರದ ಆತ್ಮಪ್ರಭೆಯ ಮರೆತು

ಇರುವ ಎನ್ನ ಮೇಲೆ ನಿನ್ನ ಕರುಣವಿಟ್ಟು ಕಾಯ್ದ ದೇವಾ 1


ತತ್ವವಿಂಶತಿ ನಾಲ್ಕು ಕೂಡಿದಾ ಈ ದೇಹದಲಿ ಏ

ಕತ್ವವಾಗಿ ಇದನೆ ನಂಬುತಾ ಮುನ್ನರಿಯದಲೆ ವಿ

ಚಿತ್ರವಾಸ್ತುವನ್ನು ಮರೆತು ಸತ್ತು ಹುಟ್ಟಿತೊಳಲಿ ಬಳಲಿ

ಕತ್ತೆಯಂತೆಯಿರುವ ಎನ್ನಾ ನಿತ್ಯ ನಿಜದೊಳಿಟ್ಟ ದೇವಾ 2


ಆದಿ ಮಧ್ಯ ಅಂತರಾಂತದಿ ತುಂಬಿರುವ ವಸ್ತು

ನಾದ ಬಿಂದು ಸ್ವಪ್ರಕಾಶದಿ ಹೃದಯದಲಿ ತೋರ್ಪ

ಭೇದಾತೀತ ನಿರ್ವಿಕಾರದಿ ಸುಬೋಧದಿ

ಆದರದಿ ಶಾಂತಿ ನಿಜದಾದಿ ಸುಖವನಿತ್ತ ಗುರು

ಪಾದಪದ್ಮ ನೆನೆದು ಪೂರ್ಣನಾದ ನಾರಾಯಣ ಪ್ರಭು 3

***