ನಾರಾಯಣ ನಿನ್ನ ನಾಮವೊಂದಿರುತಿರೆಬೇರೊಂದು ನಾಮವಿನ್ನ್ಯಾಕಯ್ಯ ಪ
ನೆಟ್ಟನೆ ದಾರಿಯು ಬಟ್ಟೆಯೊಳಿರುತಿರೆಬೆಟ್ಟವ ಬಳಸಲಿನ್ನ್ಯಾಕಯ್ಯಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆಬಿಟ್ಟಿ ಕೂಳನು ತಿನ್ನಲ್ಯಾಕಯ್ಯ 1
ಪರುಶದ ಪಾಳಗಳಿರುತಿರೆ ಬೀದಿಜರಿಗಲ್ಲ ತೊಳೆಯಲಿನ್ಯಾಕಯ್ಯಹರಿವಾಣದೊಳಗಮೃತಾನ್ನವಿರುತಿರೆತಿರಿಪೆ ಕೂಳನು ತಿನ್ನಲ್ಯಾಕಯ್ಯ 2
ಬೆಲ್ಲವು ಕರದೊಳಗಿರುತಿರೆ ಕಾಡಕಲ್ಲನು ಕಡಿಯಲಿನ್ಯಾಕಯ್ಯಬಲ್ಲಿದ ನೆಲೆಯಾದಿಕೇಶವನಿರುತಿರೆಚಿಲ್ಲರೆ ದೈವದ ಹಂಬಲ್ಯಾಕಯ್ಯ 3
***