ಭಾಮೆ ನೀ ತಂದು ತೋರೆ ದೇವ ದೇವೆನಿಸುವ ಶ್ರೀ ಹರಿ ವಾಸುದೇವನ ಪ
ಬ್ರಹ್ಮಾದಿ ವಂದ್ಯನ ಹೊಮ್ಮುಕುಟದವನ ರಮ್ಯದೋರುವ ಜಗನ್ಮೋಹನನ ಘಮ್ಮನೆ ಹೊಳಿವ ಕತ್ತುರಿ ತಿಳಕನ ಸುಮ್ಮನೆ ಸುಸ್ವರದಿ ಕೊಳಲೂದುವನ 1
ಹದ್ದೆ ಅಡುವನ ಮುದ್ದು ಮಾತಿನವನ ಗೆದ್ದು ಸಿದ್ದಿಯ ಮಣಿತಂದವನ ತಿದ್ದಿ ಕುಬಜಿಗೊಲಿದು ಶುದ್ಧಮಾಡಿದವನ ಉದ್ಧವಪ್ರಿಯ ಶ್ರೀ ಆದಿಕೇಶವನ 2
ಸುಂದರ ವದನನ ಸಾಂದ್ರಸುಖದವನ ಕಂದರ್ಪಕೋಟಿ ಸುಲಾವಣ್ಯನ ಇಂದಿರೆ ರಮಣನ ಬಂದು ಮಹಿಪತಿ ಮನೋಹರ ಮಾಡುವನ3
****