Showing posts with label ಸುಕಾಲಕೆ ಧರ್ಮವ ಮಾಡುವುದೆ ಲೇಸು prasannavenkata. Show all posts
Showing posts with label ಸುಕಾಲಕೆ ಧರ್ಮವ ಮಾಡುವುದೆ ಲೇಸು prasannavenkata. Show all posts

Monday, 18 November 2019

ಸುಕಾಲಕೆ ಧರ್ಮವ ಮಾಡುವುದೆ ಲೇಸು ankita prasannavenkata

by ಪ್ರಸನ್ನವೆಂಕಟದಾಸರು
ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.

ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1

ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2

ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3

ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4

ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
******