Showing posts with label ಭಕ್ತಿಬೇಕು ವಿರಕ್ತಿಬೇಕು ಸರ್ವ ಶಕ್ತಿಬೇಕು rangavittala. Show all posts
Showing posts with label ಭಕ್ತಿಬೇಕು ವಿರಕ್ತಿಬೇಕು ಸರ್ವ ಶಕ್ತಿಬೇಕು rangavittala. Show all posts

Wednesday, 11 December 2019

ಭಕ್ತಿಬೇಕು ವಿರಕ್ತಿಬೇಕು ಸರ್ವ ಶಕ್ತಿಬೇಕು ankita rangavittala

ಭಕ್ತಿಬೇಕು ವಿರಕ್ತಿಬೇಕು ಸರ್ವ-
ಶಕ್ತಿಬೇಕು ಮುಂದೆ ಮುಕ್ತಿಯ ಬಯಸುವಗೆ || ಪ ||

ಸತಿ ಅನುಕೂಲಬೇಕು ಸುತನಲ್ಲಿ ಗುಣಬೇಕು |
ಮತಿವಂತನಾಗಬೇಕು ಮತ ಒಂದಾಗಿರಬೇಕು || ೧ ||

ಜಪದ ಜಾಣುವೆ ಬೇಕು ತಪದ ನೇಮವೆ ಬೇಕು |
ಉಪವಾಸವ್ರತ ಬೇಕು ಉಪಶಾಂತವಿರಬೇಕು || ೨ ||

ಸುಸಂಗ ಹಿಡಿಯಲಿ ಬೇಕು ದುಸ್ಸಂಗ ಬಿಡಲಿಬೇಕು |
ರಂಗವಿಠಲನ್ನ ಬಿಡದೆ ನೆರೆನಂಬಿರಬೇಕು || ೩ ||
***

Bhakti beku virakti beku | sarva shakti beku || pa ||

Munde muktiya bayasuvage || a.pa. ||

Satiya anukoola beku sutanalli gunavirabeku | mativantanaagabeku |
mata ondaagirabeku ( madhwa matava pondirabeku ) || 1 ||

Japada jaanuve beku tapada nemave beku | upavaasa vruta beku
( upavaasa maadabeku )  upashaanti irabeku || 2 ||

Susanga hidiyalibeku ( satsangava maadabeku ) dussanga bidaleebeku
rangaviththalana ( paada hingade kondaadabeku ) bidade nere nambirabeku || 3 ||
*****