Showing posts with label ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ purandara vittala. Show all posts
Showing posts with label ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ purandara vittala. Show all posts

Tuesday, 3 December 2019

ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ purandara vittala

ರಾಗ ಪಂತುವರಾಳಿ/ಕಾಮವರ್ಧಿನಿ. ತ್ರಿಪುಟ ತಾಳ

ಎಂದಿಗೆ ಧನ್ಯ ನಾನೆಂದಿಗೆ ಪುಣ್ಯಜೀವಿ ||ಪ||
ಎಂದು ನಿನ್ನಯ ಕೃಪೆ ಬಾಹೋದಚ್ಯುತನೆ ||ಅ||

ಫಲವೃಕ್ಷಬಳ್ಳಿಗಳ ಮಲದಲಿಪ್ಪತ್ತು ಲಕ್ಷ
ಜಲದೊಳಗೆ ಒಂಬತ್ತು ಲಕ್ಷ ಜೀವಿಸಿ
ಅಳಲಿದೆ ಏಕಾದಶ ಲಕ್ಷ ಕ್ರಿಮಿಯಾಗಿ
ಬಳಲಿದೆ ಅಂಡಜಾಲಂಗಳಲಿ ದಶಲಕ್ಷ ||

ನರನಾಗಿ ನಾಲ್ಕು ಲಕ್ಷ ಜನ್ಮ ಜನಿಸಿ
ಪರಿಪರಿ ಭವಣೆಗಳನನುಭವಿಸಿದೆನೊ
ಸರಸಿಜಾಕ್ಷನೆ ನಿನ್ನ ಭಜನೆ ಮಾಡದೆ ದೇವ
ಸರಸಿಜ ಸಂಭವನ ಶತಕಲ್ಪದಲಿ ||

ಎಂಭತ್ತನಾಲ್ಕು ಲಕ್ಷ ಯೋನಿಗಳಲ್ಲಿ ಬಿದ್ದು
ಕುಂಭಿನಿಯಲಿ ಬಂದು ನೊಂದೆನೊ ಸ್ವಾಮಿ
ಅಂಬುಜಾಕ್ಷ ಆಲದೆಲೆಯಲ್ಲಿ ಮಲಗಿದ
ಕಂಬುಗ್ರೀವ ಚಕ್ರಧರ ಪುರಂದರವಿಠಲ ||
***

pallavi

endige dhanya nAnendige puNyajIvi

anupallavi

endu ninnaya krpe bAhOdacyutane

caraNam 1

bala vrSa baLLigaLa maladalippattu lakSa jaladoLage ombattu lakSa jIvisi
aLalide EkAdasha lakSa krimiyAgi baLalide aNDajAlangaLali dasha lakSa

caraNam 2

naranAgi nAlgu lakSa janma janisi paripari bhavaNeganubhavisideno
sarasijAkSane ninna bhajane mADade dEva sarasija sambhavana kalpadali

caraNam 3

embatta nAlgu lakSa yOnigaLalli biddu kumbhiniyali bandu nondeno svAmi
ambujAkSa Aladeyalli malagida kambugrIva cakradhara purandara viTTala
***