RAO COLLECTIONS SONGS refer remember refresh render DEVARANAMA
ನಂಬಲು ಕೆಟ್ಟವರು ಆರು ಜಗದೊಳು ಪ
ಹರಿ ನೀನೆ ಗತಿ ಎಂದು ಅರಿತ ಪ್ರಲ್ಹಾದನ
ದುರಿತವ ಭರದಲಿ ತರಿದ ಶ್ರೀಹರಿಯನು 1
ಕುರು ಸಭೆಯೊಳು ನರಹರಿಯನು ಸ್ಮರಿಸಿದ
ತರುಣಿಯೊಳು ಕರುಣಿಸಿ ಪೊರೆದ ಶ್ರೀಧರನನ್ನು 2
ಅನುದಿನದಲಿ ನಮ್ಮ ಹನುಮೇಶ ವಿಠಲನ
ನೆನೆದ್ವಾಲ್ಮೀಕನ ವಿಮೋಚನೆ ಮಾಡ್ದ ಶ್ರೀರಾಮನ 3
*****