by ಆಚಾರ್ಯ ನಾಗರಾಜು ಹಾವೇರಿ.
ಲಕ್ಷ್ಮೀನಾರಾಯಣ ಮುನಿಯ -
ನೆನೆಯಿರೋ ।
ಲಕ್ಷ್ಮೀನಾರಾಯಣರ ಸನ್ನಿಧಾನ -
ಪಾತ್ರನಾ ।। ಪಲ್ಲವಿ ।।
ಶೇಷಗಿರಿ ವಾಸನ
ಭಕ್ತಿಯಿಂದಲಿ ಪೂಜಿಪನ ।
ಶೇಷಗಿರಿ ಗಿರಿಯಮ್ಮನ
ಪ್ರೀತಿಯ ಕಂದನ ।। ಚರಣ ।।
ಗುರು ವಿಬುಧೇಂದ್ರರಲಿ -
ದ್ವೈತ ಶಾಸ್ತ್ರವನು ।
ಹರುಷದಿಂದಲಿ ತಿಳಿದ
ಮಹಾ ಮಹಿಮನ ।। ಚರಣ ।।
ವಿಬುಧಮಣಿ ಲಕ್ಷ್ಮೀ-
ನಾರಾಯಣಮುನಿಗೆ ।
ವಿಬುಧೇಂದ್ರ ಯತಿಯು -
ವೇಂಕಟನಾಥನಾಜ್ಞದಿ ।
ಸುಬುಧ ಜನರು ನೋಡೆ -
ಶ್ರೀಪಾದರಾಜ ಎಂದು । ಕರೆ ।
ಯೆ ಬುಧರೆಲ್ಲರು ಕರೆದರು -
ಶ್ರೀಪಾದರಾಜರೆಂದು ।। ಚರಣ ।।
****