Showing posts with label ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ kalimardhanakrishna. Show all posts
Showing posts with label ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ kalimardhanakrishna. Show all posts

Monday 2 August 2021

ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ ankita kalimardhanakrishna

ಸೃಷ್ಟಿಯೊಳಗೆ ಶ್ರೀ ಕೃಷ್ಣಮೂರುತಿ ಇನ್ನೆಷ್ಟು ಸ್ತುತಿಸಲಿ ನಾನು

ದೃಷ್ಟಿಯಿಂದಲಿ ನೋಡು ಮನಮುಟ್ಟಿ ಭಜಿಸುವೆನು

ಸೃಷ್ಟ್ಯಾದಷ್ಟ ಕರ್ತಾ ವಿಠಲಗುಣಶೀಲ

ಅಷ್ಟಯತಿಗಳಿಂದ ಇಷ್ಟದಿ ಪೂಜೆಗೊಂಡ ಮದವೋ

ಅಟ್ಟಹಾಸದಿಂದಲಿ ಬೆಟ್ಟ ಬೆರಳಿನಿಂದಲಿನೆತ್ತಿದ ಮದವೊ

ದಿಟ್ಟಮೂರುತಿ ನಮ್ಮ ಕಾಳೀಮರ್ಧನಕೃಷ್ಣ

ಮನೋಭೀಷ್ಟೆಯ ಕೊಡೋ 1


ಇಂದಿರೇಶನೆ ನಿನ್ನ ಒಂದಿನವು ನಾನು

ಗೋವಿಂದ ನಿನ್ನಯ ಪಾದಾರವಿಂದವ

ಭಜಿಸಲಿಲ್ಲ ಆನಂದ ಮೂರುತಿ ನಿನಗಿಂತ

ಸಮಾನ ಅನಿಮಿತ್ತ ಬಂಧುಗಳು ಯನಗಿಲ್ಲ

ಎನ್ನಂಥ ಭಕುತರು ನಿನಗನಂತರರಿರುವರು

ನಿನ್ನಂಥ ಕರುಣೆ ಇನ್ನಿಲ್ಲ ಜಗದೊಳು

ಸರ್ಪಶಯನ ನಮ್ಮ ಕಾಳೀಮರ್ಧನಕೃಷ್ಣ

ನಿರುತದಿ ವೊಲಿಯೇ 2


ಸುಂದರಿಯರ ಸೇರಿ ಆನಂದದಿಂದ ಕಳೆದ ಮದವೋ

ಮೇದಿನಿಯೊಳಗೆ ದಾಸಾರ್ಯರಿಂದ

ಸೇವೆಗೊಂಬುವ ಮದವೋ

ಸೋಳಸಾಸಿರ ಸುದತಿಯರೊಪ್ಪುವ ಮದವೊ

ಮುರಳೀಧರ ನಮ್ಮ ಕಾಳೀಮರ್ಧನಕೃಷ್ಣ ಇಷ್ಟದಿ ಒಲಿಯೆ 3


ಮುಕುಂದ ನಿನ್ನ ಪಾದ ಎಂದಿಗೆ ಲಭ್ಯವೊ ಕಂದನ ನುಡಿ ಕೇಳಿ

ಕಂಬದಿಂದಲಿ ಬಂದ ಕರುಣಿ ನೀನು ಅಂದು ಧೃವಗೆ

ಆನಂದ ಪದವಿಯನಿತ್ತು

ಬಂದು ದ್ರೌಪದಿಯ ಮಾನವ ಕಾಯ್ದು ವಸುದೇವ ದೇವಕಿಯ

ಬಂಧನವ ಬಿಡಿಸಿದಿ ಆನಂದದಿಂದಲಿ ಅಜಮಿಳಗೊಲಿದು

ಮಡುವಿನೊಳಗಿರಲು ಗಜರಾಜ ಮಡದಿಗೆ ಹೇಳದೆ

ಗರುಡವಾಹನನಾಗಿ ಬಂದು ಮಕರಿಯನ್ನು ಕೊಂದ

ಸಿಂಧುಶಯನ ನಮ್ಮ ಕಾಳೀಮರ್ಧನಕೃಷ್ಣ ಆಪತ್-ಬಂಧೋ 4


ಬಾಲಕತನದಲ್ಲಿ ಏನೇನು ಲೀಲೆಯ ಮಾಡಿದ್ಯೊ

ಗೋಪಾಲಕೃಷ್ಣ ಮೂರುತಿ ಎಂದು ವರ್ಣಿಸಲೋ ನಿನ್ನ ಕೀರುತಿ

ಗೋವುಗಳ ಕಾಯ್ದುಕೊಂಡು ಎಂದಿಗೆ ಬರುತಿ

ನಿನಗೇಕೋ ಇಂಥಾ ಮದವು ಪಾರ್ಥಸಾರಥಿ

ಕ್ಷೀರಸಾಗರದಲ್ಲಿ ಲಕ್ಷ್ಮೀ ಸಹಿತವಾಗಿ

ಆಲದೆಲೆಯ ಮೇಲೆ ಮಲಗಿರುತ್ತೀ

ಥರವಲ್ಲವೋ ನಿನಗಿಂಥ ಮದವು

ಬ್ರಹ್ಮಾದ್ಯಮರ ಒಂದಿತ ಮದವು

ಜಾರಚೋರ ನಮ್ಮ ಕಾಳೀಮರ್ಧನಕೃಷ್ಣ ಕರುಣಾಸಾಗರ 5

****