..
ಅಂಗನೇರು ಕೂಡಿ ಸ್ವರ ಸಂಗೀತದಿಂದಲೀಗ
ಗಂಗಜನಕ ಚಾರು ಚರಣಕೆ ಹರುಷದಿಂ ಬೇಗ
ಮಂಗಳಾತ್ಮಕನಾದ ಶ್ರೀ ನರಶಿಂಗ ರಾಯನಿಗೆ
ಶೃಂಗಾರದಿಂ ಜಯಮಂಗಳವೆಂದು ಪಾಡಿರೆ 1
ದೀನ ಜನರುದ್ಧಾರಗೈಯುವ ದಾನವಾಂತಕಗೆ
ನೀನೆ ಗತಿಯೆಂದ ಮಾನಿನಿಯಳ ಮಾನ ಕಾಯ್ದವಗೆ
ಸಾನುರಾಗದಿ ಧ್ಯಾನಿಸುತಲಿ ಶ್ರೀನಿವಾಸನಿಗೆ
ಬಲು ಛಂದದಿ ಜಯ ಮಂಗಳವೆಂದು ಪಾಡಿರೆÉ 2
ಪೊಂದಿದ ಜನರನು ತ್ವರದಿ ಪೊರೆಯುವ
ನಂದಕಂದನಿಗೆ | ವಂದಿಸಿ ಕರುಣದಿ
ಇಂದು ಮುಖಿಯರು ಸಿಂಧು ಶಯನಗೆ | ಆನಂದದಿಂದಲಿ
ಶ್ರೀ ಶಾಮಸುಂದರಗೆ ಘನ ಮೋದದಿಂ
ಜಯ ಮಂಗಳವೆಂದು ಪಾಡಿರೆÉ 3
***