Showing posts with label ಮಂಡೆ ಬೋಳಾದರೇನು ಮನ ಶುದ್ಧಿಯಿಲ್ಲವು hayavadana MANDE BOLAADARENU MANA SHUDDHIYILLAVU. Show all posts
Showing posts with label ಮಂಡೆ ಬೋಳಾದರೇನು ಮನ ಶುದ್ಧಿಯಿಲ್ಲವು hayavadana MANDE BOLAADARENU MANA SHUDDHIYILLAVU. Show all posts

Saturday, 11 December 2021

ಮಂಡೆ ಬೋಳಾದರೇನು ಮನ ಶುದ್ಧಿಯಿಲ್ಲವು ankita hayavadana MANDE BOLAADARENU MANA SHUDDHIYILLAVU




ಮಂಡೆ ಬೋಳಾದರೇನು ಮನಶುದ್ಧಿಯಿಲ್ಲವು || ಪ ||

ಕಂಡು ಹಯವದನನ್ನ ಒಲಸಿಕೊಂಡವ ಧನ್ಯ || ಅ.ಪ ||

ನಾರದರವತಾರವೆಂದು ಜಗಕೆ ತೋರಿ ಸಿರಿ
ಪುರಂದರದಾಸರ ಮನೆಯಲ್ಲಿ
ಪರಿಪರಿ ಲೀಲೆಯ ಮಾಡಿ ಬಿಡದೆ ನಿತ್ಯ
ಅರಿತು ಅವರ ಸಾಧನಕೆ ಸಾರಥಿಯಾದಿ || ೧ ||

ಗುರು ವ್ಯಾಸಮುನಿ ನಿಮ್ಮ ನೋಡುವೆನೆಂತೆಂದೊಡೆ
ಮರೆ ಮಾಡಿ ಮೂರು ರೂಪ ಜನುಮವೆಂದಿ
ಹರುಷದಿ ಕನಸಿನೊಳಗೆ ಬಂದುಭಯರಿಗೆ
ಅರುಪಿಸಿ ಸ್ವರೂಪ ಅರಿಯದಂತಿದ್ಯೊ ದೇವ || ೨ ||

ಅವರ ಮೇಲಿದ್ದ ದಯ ಎನ್ನ ಮೇಲೆಂದಿಗೋ ದೇವ
ಯಾವುದೂ ಭರವಸೆದೋರದಯ್ಯ
ಕವಿದೆಮ್ಮಭಿಮಾನ ಬಿಟ್ಟರೆ ಬಿಡದಯ್ಯ
ಅವಕಾಲಕ್ಕೆ ನಿನ್ನ ದಾಸನೆಂಬಂತೆ ಮಾಡೊ || ೩ ||

ನಮ್ಮ ಗುರುಗಳ ಸಮ್ಮತದಿಂದುಡುಪಿಯಲ್ಲಿ
ಗಮ್ಮನೆ ಪೇಳಿದೆನು ಸಟೆಯಲ್ಲವು
ಸುಮ್ಮನೆ ತಿಳಿಯದೆ ಅಲ್ಲವೆಂದವರ್ಗಿನ್ನು
ಗಮ್ಮನೆ ತಮಸಿನೊಳಿಹುದು ಸತ್ಯವು || ೪ ||

ಓದಿದಾಕ್ಷಣದಿಂದ ಧನ್ಯನೆಂದೆನು ನಾನು
ಸಾಧಿಸಲಾಪೆನೆ ನಿನ್ನ ಸೇವೆಯನು
ಆದಿಮೂರುತಿ ಸಿರಿಹಯವದನರೇಯ
ಮೋದದಿಂದ ನಿನ್ನ ದಾಸರ ಸಂಗದಲ್ಲಿಡು ಕಂಡ್ಯ || ೫ ||
*******

ರಾಗ: ವರಹಾಳಿ     ತಾಳ: ತ್ರಿವಿಡಿ (raga, taala may differ in audio)